ಬಾಗಲಕೋಟೆ: ಜಿಲ್ಲೆಯ ಜಮಖಂಡಿ (Jamkhandi) ತಾಲ್ಲೂಕಿನ ಹಿಪ್ಪರಗಿಯಲ್ಲಿ (Hippargi) ಶ್ರೀ ಸಂಗಮೇಶ್ವರ ಮಹಾರಾಜರ 93ನೇ ಪುಣ್ಯಸ್ಮರಣೋತ್ಸವ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಹಿಪ್ಪರಗಿ ಕಬಡ್ಡಿ ವೈಭವ- 2ನೇ ಆವೃತ್ತಿಯು ಅಂತರ್ ರಾಜ್ಯ ಮಟ್ಟದ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು (Kabaddi Tournament) ಹಮ್ಮಿಕೊಳ್ಳಲಾಗಿತ್ತು.
ಈ ಪಂದ್ಯಾವಳಿಯಲ್ಲಿ ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳನಾಡು,ಆಂಧ್ರಪ್ರದೇಶ,ಕರ್ನಾಟಕ ಸೇರಿದಂತೆ 35 ತಂಡಗಳು ಭಾಗವಹಿಸಿದ್ದವು.
ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ (Jogati Manjamma) ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಅವರ ಭವಿಷ್ಯವನ್ನು ಹಾಳು ಮಾಡಬೇಡಿ. ಕಬಡ್ಡಿಯಂತಹ ದೇಶಿಯ ಆಟಗಳನ್ನು ಆಡಿಸಿ ಬಲಿಷ್ಠರನ್ನಾಗಿ ಮಾಡುವುದರ ಜೊತೆಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಬೇಕು ಎಂದು ಹೇಳಿದರು. ಹಿಪ್ಪರಗಿ ಕಬಡ್ಡಿ ವೈಭವ ಅತ್ಯಂತ ಅದ್ದೂರಿಯಾಗಿ ಜರುಗಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಲಗೆ ಕಚ್ಚಿ, ಜೋರು ಗದರಿ ಕೈ ಎತ್ತಿದ ಸಿದ್ದರಾಮಯ್ಯ
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬಂಡಿಗಣಿ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಅಪ್ಪಾಜಿಯವರು ಹಿಪ್ಪರಗಿ ಗ್ರಾಮದ ಶಕ್ತಿ ಎಂತಹದ್ದು ಎಂದು ಈ ಕಬಡ್ಡಿ ವೈಭವವನ್ನು ನೋಡಿದರೆ ತಿಳಿಯುತ್ತದೆ. ಗಿರಿಮಲೇಶ್ವರರು, ಸಂಗಮನಾಥರು, ಮಾಧವಾನಂದರು, ಶ್ರೀಶೈಲ ಜಗದ್ಗುರುಗಳು ಹುಟ್ಟಿದ ಪುಣ್ಯಭೂಮಿ ಇದು. ಎಲ್ಲರೂ ಒಗಟ್ಟಾಗಿ ಬಾಳಿ ಎಂದು ಹಾರೈಸಿದರು.
ಸಮಾರಂಭದ ಸಾನಿಧ್ಯವನ್ನು ವಹಿಸಿಕೊಂಡ ಶ್ರೀ ಸ.ಸ.ಪ್ರಭುಜೀ ಮಹಾರಾಜರು, ತರಹದ ದೇಶಿ ಆಟಗಳನ್ನು ಆಡಬೇಕೆಂದು ತಿಳಿಸಿದರು. ಸಮಾರಂಭದ ದಿವ್ಯ ಸಾನಿಧ್ಯವನ್ನ ವಹಿಸಿದ್ದ ಶ್ರೀಶೈಲ ಮಹಾಪೀಠದ ಜಗದ್ಗುರು ಮಹಾಸನ್ನಿಧಿಯವರು, ಈ ಕಬಡ್ಡಿ ವೈಭವ ಆಯೋಜನೆ ಮಾಡುವುದಕ್ಕಷ್ಟೇ ಸೀಮಿತವಾಗದೇ ಅಂತರರಾಜ್ಯ ಮಟ್ಟದಿಂದ ಆಗಮಿಸಿರುವ ಮಹಿಳಾ ತಂಡಗಳಂತೆ ಪ್ಪರಗಿ ಗ್ರಾಮದಿಂದಲೂ ಬಲಿಷ್ಠ ಕಬಡ್ಡಿ ತಂಡ ನಿರ್ಮಾಣವಾಗಬೇಕೆಂದು ಕರೆ ಕೊಡುವುದರ ಜೊತೆಗೆ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವೆಂದು ತಮ್ಮ ಆಶೀರ್ವಚನ ನೀಡಿದರು.
2ನೇ ಆವೃತ್ತಿಯಲ್ಲಿ ರತ್ನಗಿರಿ ಪ್ರಥಮ, ಉತ್ತರ ಪ್ರದೇಶ ದ್ವಿತೀಯ, ಸತಾರ ತೃತೀಯ, ಗುಜರಾತ್ ಚತುರ್ಥ ಸ್ಥಾನವನ್ನು ಗಳಿಸಿದವು.