ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಂಗಳವಾರ ಬೆಳ್ಳಂ ಬೆಳಗ್ಗೆ ಆಪ್ ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಮನೆ ಮೇಲೆ ದಾಳಿ ನಡೆಸಿದೆ.
ದೆಹಲಿಯ ಭ್ರಷ್ಟಾಚಾರ ವಿರೋಧಿ ಸಂಸ್ಥೆ (ದೆಹಲಿ ಆ್ಯಂಟಿ ಕರಪ್ಷನ್ ಬ್ಯೂರೋ) ಸಲ್ಲಿಸಿದ ಎಫ್‌ಐಆರ್ ಮತ್ತು ಸಿಬಿಐ ದಾಖಲಿಸಿದ್ದ ಮತ್ತೊಂದು ಎಫ್‌ಐಆರ್ ಆಧರಿಸಿ ಇಡಿ ಕ್ರಮ ಕೈಗೊಂಡಿದೆ. ಅಮಾನತುಲ್ಲಾ ಖಾನ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ವಕ್ಫ್ ಮಂಡಳಿಯಲ್ಲಿ (Delhi Waqf Board) ಅಕ್ರಮ ನೇಮಕಾತಿ ನಡೆದಿದ್ದು, ಭ್ರಷ್ಟಾಚಾರದಲ್ಲೂ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್-ಬಿಜೆಪಿ ನಡುವೆ ಶುರುವಾಯ್ತು ಪೋಸ್ಟರ್ ವಾರ್
Advertisement
Advertisement
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಶೋಧ ನಡೆಸಲಾಗುತ್ತಿದೆ. ದೆಹಲಿಯ ವಕ್ಫ್ ಮಂಡಳಿಗೆ ಸಂಬಂಧಿಸಿದ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿಂತೆ ವರ್ಷ ಎಸಿಬಿ ಅಮನತುಲ್ಲಾರನ್ನ ಬಂಧಿಸಿತ್ತು. ನಂತರ ಸೆಪ್ಟೆಂಬರ್ 2022ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ವೀಲಿಂಗ್ ಮಾಡಿದ ಬೈಕ್ ಸುಟ್ಟು ಹಾಕಿ, 45 ಲಕ್ಷ ಸಬ್‌ಸ್ಕ್ರೈಬ್ ಇರೋ ಯೂಟ್ಯೂಬ್ ಚಾನೆಲನ್ನು ಕಿತ್ತಾಕಿ: ಹೈಕೋರ್ಟ್ ಚಾಟಿ
Advertisement
Advertisement
ಈಗಾಗಲೇ ದೆಹಲಿಯ ಹೊಸ ಮದ್ಯ ನೀತಿ ಪ್ರಕರಣದಲ್ಲಿ (Delhi Liquor Policy Case) ಡಿಸಿಎಂ ಮನೀಶ್ ಸಿಸೊಡಿಯಾ ಸೇರಿ ಹಲವು ನಾಯಕರು ಬಂಧನಕ್ಕೊಳಪಟ್ಟಿದ್ದಾರೆ. ಇದನ್ನೂ ಓದಿ: ಹೊಸ ಮದ್ಯ ನೀತಿ ಪ್ರಕರಣದ ಕಿಂಗ್‌ಪಿನ್ ಸರದಿಯೂ ಬರಲಿದೆ; ದೆಹಲಿ ಸಿಎಂಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಅನುರಾಗ್ ಠಾಕೂರ್
Web Stories