ಹುಬ್ಬಳ್ಳಿ: ಅಪಘಾತ ಪ್ರಕರಣವೊಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. 50 ಲಕ್ಷದ ಜೀವವಿಮೆ ಆಸೆಗಾಗಿ ಅಮಾಯಕ ಯುವಕನೊಬ್ಬನ ಕೊಲೆ ಮಾಡಿರುವ ಆಘಾತಕಾರಿ ಅಂಶ ಪೊಲೀಸ್ ತನಿಖೆ ವೇಳೆ ಹೊರಬಂದಿದೆ.
ಬುಧವಾರ ರಾತ್ರಿ ಹುಬ್ಬಳ್ಳಿಯ ಗೋಕುಲ್ ರಸ್ತೆಯ ರೇವಡಿ ಹಾಳ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದನೆನ್ನಲಾದ ಸಂಜೀವಕುಮಾರ್ ಬೆಂಗೇರಿ ತನ್ನ ಹೆಸರಿನಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕ್ ನಲ್ಲಿ ವಿಮೆ ಹೊಂದಿದ್ದನು. ಆದರೆ ಆ ಹಣವನ್ನು ಪಡೆಯಬೇಕು ಎನ್ನುವ ಆಸೆಯಿಂದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ, ಶವದ ಪಕ್ಕದಲ್ಲಿ ತನ್ನ ಬೈಕ್, ಚಪ್ಪಲಿ ಬಿಟ್ಟು ತಾನೇ ಸತ್ತಿರುವುದಾಗೆ ಸೀನ್ ಕ್ರಿಯೇಟ್ ಮಾಡಿದ್ದ. ಈ ಅಪಘಾತದ ಸುದ್ದಿ ಮನೆಯವರಿಗೆ ತಲುಪಿತ್ತು ಬಳಿಕ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸಹ ಸತ್ತ ವ್ಯಕ್ತಿಯನ್ನು ಸಂಜೀವಕುಮಾರ್ ಬೆಂಗೇರಿ ಎಂದೆ ತಿಳಿದುಕೊಂಡಿದ್ದರು. ಆದರೆ ಸಂಜೀವ್ ಸಹೋದರ ಮಂಜುನಾಥ್ ಬೆಂಗೇರಿ ತನ್ನ ಅಣ್ಣನ ಕೈ ಮೇಲೆ ಶ್ರೀ ರಾಮನ ಹಚ್ಚೆ ಇರುವುದಾಗಿ ಹೇಳಿಕೆ ನೀಡಿದ್ದನು. ಬಳಿಕ ಪೊಲೀಸರು ಶವ ಪರೀಕ್ಷೆ ಮಾಡಿದಾಗ ಕೈ ಮೇಲೆ ಯಾವುದೇ ಹಚ್ಚೆ ಇರಲಿಲ್ಲ. ಅಲ್ಲದೇ ಅದೊಂದು ಮುಸ್ಲಿಂ ವ್ಯಕ್ತಿಯ ಶವ ಎಂಬುದು ಗೊತ್ತಾಗಿದೆ. ಹೀಗಾಗಿ ಇದೊಂದು ಹಣ ಹೊಡೆಯಲು ಆಡಿದ ನಾಟಕ ಎಂಬುದು ಬೆಳಕಿಗೆ ಬಂದಿದೆ.
ತಕ್ಷಣ ಕಾರ್ಯ ಪ್ರವೃತ್ತರಾದ ಗೋಕುಲ್ ರೋಡ್ ಠಾಣಾ ಪೊಲೀಸರು, ಮಹಾಂತೇಶ ದುಗ್ಗಾಣಿ ಹಾಗೂ ಅಮೀರ್ ಶೇಖ್ ರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸಂಜೀವಕುಮಾರ್ ಬೆಂಗೇರಿ ತಲೆ ಮರೆಸಿಕೊಂಡಿದ್ದಾನೆ. ಈ ಘಟನೆ ಇದೇ ಮೊದಲೇ ಅಲ್ಲ ಈ ಹಿಂದೆ ಈ ರೀತಿಯ ಪ್ರಯತ್ನಗಳು ನಡೆದಿತ್ತು ಎಂದು ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv