ಮಂಗಳೂರು: ಸುಮಾರು ಮೂರು ದಶಕಗಳ ಬಳಿಕ ಮಂಗಳೂರು (Mangaluru) ಕಡಲ ಕಿನಾರೆಗೆ ಕಡಲಾಮೆಗಳು (Sea Turtles) ಬಂದಿವೆ.
ಅಳಿವಿನಂಚಿನ ಅತ್ಯಂತ ಅಪರೂಪದ ಕಡಲಾಮೆ ಒಲೀವ್ ರಿಡ್ಲೆ ಮಂಗಳೂರು ಕಡಲ ಕಿನಾರೆಗೆ ಬಂದಿವೆ. ಕಡಲಲ್ಲಿ ಮೊಟ್ಟೆ ಇಟ್ಟಿವೆ. ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್‌ಗೆ ಕಡಲಾಮೆಗಳು ಬಂದಿವೆ.
Advertisement
ಸಸಿಹಿತ್ಲು ಕಡಲತಡಿಯಲ್ಲಿ ಮೊಟ್ಟೆ ಇಟ್ಟಿವೆ. ಕಡಲ ತಡಿಗೆ ಬಂದು ಮೊಟ್ಟೆ ಇಡುತ್ತಿರುವ ಕಡಲಾಮೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊಟ್ಟೆಗಳ ಸಂರಕ್ಷಣೆಗೆ ಸ್ಥಳೀಯ ಮೀನುಗಾರರು ವಿಶೇಷ ನಿಗಾ ವಹಿಸಿದ್ದಾರೆ.
Advertisement
ಮಂಗಳೂರಿನ ಸುತ್ತ ಮುತ್ತ ಸುಮಾರು 12 ಕಡೆ ಈ ಹಿಂದೆ ಆಮೆ ಮೊಟ್ಟುಗಳು ಪತ್ತೆಯಾಗಿದ್ದವು. ಮಂಗಳೂರಿನ ಕಡಲತಡಿಯ ತಣ್ಣೀರು ಬಾವಿ, ಸಸಿಹಿತ್ಲು, ಬೆಂಗ್ರೆ ಪ್ರದೇಶಕ್ಕೆ ಈ ಹಿಂದೆ ಕಡಲಾಮೆಗಳು ಬರುತ್ತಿದ್ದವು.
Advertisement
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1 ರ ಅಡಿಯಲ್ಲಿ ಕಡಲಾಮೆಗಳು ರಕ್ಷಣೆ ಪಡೆದಿವೆ. ತಾ ಹುಟ್ಟಿದ ಜಾಗಕ್ಕೆ ಮರಳಿ ಬಂದು ಮೊಟ್ಟೆಯಿಡುವ ಅಪರೂಪದ ಕಡಲಾಮೆಗಳು ಇವಾಗಿವೆ.