ಬೆಳಗಾವಿ: ಭಾರತ ದೇಶದಲ್ಲಿ ಎಸ್‌ಡಿಪಿಐ (SDPI) ನವರೇ ಅಲ್ಪಸಂಖ್ಯಾತರ ವಿರೋಧಿಗಳು. ಅವರಿಂದ ನಾನೇನು ಹೊಗಳಿಕೆ ಬಯಸಲ್ಲ. ಅವರ ಹೇಳಿಕೆಗೆ ಸೊಪ್ಪು ಹಾಕೋದಿಲ್ಲ. ಖಂಡಿತವಾಗಿಯೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮುಸ್ಲಿಂ ಮೀಸಲಾತಿ (Reservetion) ವಿಚಾರದಲ್ಲಿ ಚಿತ್ರದುರ್ಗದ ಎಸ್‌ಡಿಪಿಐ ಮುಖಂಡ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎಸ್‌ಡಿಪಿಐನವರು ನನ್ನನ್ನು ಹೊಗಳಲು ಸಾಧ್ಯನಾ? ಅದೊಂದು ದೇಶದ್ರೋಹಿ ಸಂಘಟನೆ. ಅವರು ದೇಶ ವಿರೋಧಿ ಚಟುವಟಿಕೆ ಮಾಡುವವರು. ಭಾರತ ದೇಶದ ಅಲ್ಪಸಂಖ್ಯಾತರ ವಿರೋಧಿಗಳೇ ಎಸ್‌ಡಿಪಿಐನವರು. ಅವರಿಂದ ನಾನೇನು ಹೊಗಳಿಕೆ ಬಯಸಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: ಮೀಸಲಾತಿ ವಿಚಾರಕ್ಕೆ ಜೈಲಿಗೋದರೂ ಚಿಂತೆಯಿಲ್ಲ ; SDPI ಎಚ್ಚರಿಕೆ
ಅಥಣಿ ಟಿಕೆಟ್ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಏಪ್ರಿಲ್ ಮೊದಲ ವಾರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಗೆಲ್ಲುವಂತಹ ಪಕ್ಷಕ್ಕೆ ಎಲ್ಲ ಕಡೆ ಫೈಟ್ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕಳೆದ 2-3 ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡುತ್ತಿದ್ದಾರೆ. ಟಿಕೆಟ್ ಘೋಷಿಸದ 124 ಕ್ಷೇತ್ರಗಳಲ್ಲಿ ನಮ್ಮ ಶಾಸಕರಿಗೆ ಕರೆ ಮಾಡುತ್ತಿದ್ದಾರೆ. ಟಿಕೆಟ್ ಭರವಸೆ ನೀಡುತ್ತಿದ್ದಾರೆ. ಹತಾಶೆಯಿಂದ ನಮ್ಮ ಪಕ್ಷದವರನ್ನು ಸಂಪರ್ಕಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದಿವಾಳಿ ಆಗಿದೆ ಎನ್ನುವುದಕ್ಕೆ ಇದೆ ಸಾಕ್ಷಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನನ್ನ ತಂದೆ ಯಾವತ್ತೂ ರಾಜಕೀಯ ಪಾಠ ಹೇಳಿಕೊಡಲಿಲ್ಲ – ಸಾರ್ವಜನಿಕ ವೇದಿಕೆಯಲ್ಲಿ ದರ್ಶನ್ ಧ್ರುವನಾರಾಯಣ ಮೊದಲ ಭಾಷಣ