ಬೆಂಗಳೂರು: ಎಸ್‌ಡಿಪಿಐನವರಿಗೆ ಬೆಂಕಿ ಹಚ್ಚುವುದು ಒಂದೇ ಕೆಲಸ. ಅವರು ಸೌಹಾರ್ದತೆಯಲ್ಲಿರುವ ಸಮಾಜವನ್ನು ಒಡೆಯುತ್ತಿದ್ದಾರೆ ಎಂದು ಬರಹಗಾರ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್‌ಡಿಪಿಐ ಅಧ್ಯಕ್ಷ ಮಜೀದ್ ಪ್ರಚೋದನಕಾರಿ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ಎಸ್‌ಡಿಪಿಐನಿಂದ ಹೊಸದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಸಮಾಜದಲ್ಲಿ ಬೆಂಕಿ ಹಚ್ಚಲು ಕಾಯುತ್ತಿದ್ದಾರೆ. ಹಿಂದೂಗಳು ಬಲಶಾಲಿಗಳು. ಅದಕ್ಕಾಗಿ ಅವರು ಹೆದರಿ ಈ ರೀತಿಯಾಗಿ ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
Advertisement
Advertisement
ಮಳಲಿ ಮಸೀದಿ ವಿಚಾರಕ್ಕೆ ಬಂದರೆ, ಈಗಾಗಲೇ ತಾಂಬೂಲ ಪ್ರಶ್ನೆ ಆಗಿದೆ. ಮುಂದೆ ಅದು ಅಷ್ಟ ಮಂಗಲ ಪ್ರಶ್ನೆಗೆ ಹೋಗಬಹುದು. ಬಳಿಕ ಅದು ಕೋರ್ಟ್ಗೂ ಹೋಗಬಹುದು. ಮಸೀದಿ ಬಗ್ಗೆ ಅನುಮಾನ ಇದ್ದರೆ, ಕೋರ್ಟ್ ತೀರ್ಮಾನ ಕೈಗೊಳ್ಳಲಿದೆ ಎಂದರು.
Advertisement
ನಮ್ಮ ದೇವಸ್ಥಾನ ಮರಳಿ ಪಡೆಯೋಕೆ ಈ ರೀತಿ ಹೋರಾಟ ನಡೆಯುತ್ತದೆ. ಮುಸ್ಲಿಂ ಸಮಾಜ ದೌರ್ಜನ್ಯದಿಂದ ಕೂಡಿದ್ದಾಗ ನಮ್ಮ ಸಮಾಜ ವೀಕ್ ಆಗಿತ್ತು. ಈಗ ನಮ್ಮ ಸಮಾಜ ಬಲಿಷ್ಠವಾಗಿದೆ. ಮುಂದೆ ಇಂತಹ ವಿಚಾರ ಹಲವು ಬರಲಿದೆ. ಈಗ ನೀವು ಹೆದರಿ, ಒಂದು ಹಿಡಿ ಮಣ್ಣು ಕೊಡುವುದಿಲ್ಲ ಯಾರಪ್ಪನದ್ದು ಎಂದು ಮಾತನಾಡುತ್ತೀರಿ. ಈ ರೀತಿ ಉದ್ರೇಕದಿಂದ ಮಾತನಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕ್ಬೇಕು: ಅಬ್ದುಲ್ ವಾಜೀದ್ ವಿವಾದಾತ್ಮಕ ಹೇಳಿಕೆ
Advertisement
ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಒದ್ದು ಒಳಗೆ ಹಾಕಬೇಕು ಎಂಬ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸೂಲಿಬೆಲೆ, ನಾವು ಮೌಲ್ವಿಗಳನ್ನು ಒದ್ದು ಒಳಗೆ ಹಾಕಬೇಕು ಎಂದಿದ್ದರೆ ಏನಾಗುತ್ತಿತ್ತೋ ಅದೇ ಆಗುತ್ತದೆ ಎಂದು ಎಚ್ಚರಿಕೆ ನೀಡಿ, ತಮ್ಮನ್ನು ತಾವು ಮೊದಲು ತಿದ್ದಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು. ಇದನ್ನೂ ಓದಿ: ತರಗತಿ, ಗ್ರಂಥಾಲಯಕ್ಕೂ ಹಿಜಬ್ ಧರಿಸಿ ಬರುವಂತಿಲ್ಲ- ವಿವಾದದ ಬಳಿಕ ಮಂಗಳೂರು ವಿವಿ ಖಡಕ್ ಆದೇಶ
ಆರ್ಯರು ಹೊರಗಿನಿಂದ ಬಂದವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ಸಿದ್ದರಾಮಯ್ಯನವರ ಹೇಳಿಕೆ ವಿಚಾರ ನಾನು ಗಮನಿಸಿದ್ದೆನೆ. ಹಳೇ ಹೇಳಿಕೆ ಅಳಿಸಲು ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ. ಆರ್ಯರು ಹೊರಗಡೆಯಿಂದ ಬಂದವರು ಎಂದು ಅವರು ಹೇಳಿದ್ದಾರೆ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ಆಗಬೇಕೋ ಬೇಡವೋ ಎಂಬ ವ್ಯಾಪಕ ಚರ್ಚೆ ನಡೆಯುತ್ತಿದೆ. ಪಠ್ಯ ಪುಸ್ತಕ ಏಕೆ ಪರಿಷ್ಕರಣೆ ಆಗಬೇಕು ಎಂಬುದಕ್ಕೆ ಸಿದ್ದರಾಮಯ್ಯನವರೇ ಉದಾಹರಣೆ. ಆರ್ಯ ಆಕ್ರಮಣಕಾರಿ ಕುರಿತಂತೆ ಒಂದು ಚಿಂತನೆಯನ್ನು ಪಠ್ಯ ಪುಸ್ತಕ ಮಾಡಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರನ್ನು ಕೂರಿಸಿ ಪಾಠ ಬೋಧಿಸಲಿ. ಕಾಂಗ್ರೆಸ್‌ನವರು ಏಕೆ ಯಾವಾಗಲೂ ಆ್ಯಂಟಿ ಇಂಡಿಯನ್ ಆಗಿರುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.