-ಹಿಂದೂ ಸಂಘಟನೆಗಳಿಂದ ಆಕ್ರೋಶ
ಹುಬ್ಬಳ್ಳಿ: ರಂಜಾನ್ (Ramzan) ಆಚರಣೆ ಸಮಯದಲ್ಲಿ ಒಂದು ಕಡೆ ಶಾಂತಿಯುತ ರಂಜಾನ್ ಪ್ರಾರ್ಥನೆ ನಡೆಯುತ್ತಿದ್ದರೆ, ಮತ್ತೊಂದೆಡೆ ವಿವಿಧ ವಿಷಯಗಳ ಪ್ಲೇ ಕಾರ್ಡ್ ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಎಸ್‌ಡಿಪಿಐ (SDPI) ಕಾರ್ಯಕರ್ತರು ಅಸಮಾಧಾನ ಹೊರಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಪ್ಯಾಲೆಸ್ಟಿನ್‌ನಲ್ಲಿ ಯುದ್ಧ ನಿಲ್ಲಬೇಕು, ಎಸ್‌ಡಿಪಿಐ ಅಧ್ಯಕ್ಷ ಎಂಕೆ ಫೈಜಿ ಬಿಡುಗಡೆಯಾಗಬೇಕು, ವಕ್ಫ್ ಆಸ್ತಿ ಎಂದಿಗೂ ಮುಸ್ಲಿಮರದ್ದೇ, ದೇಶ, ಮನಸ್ಸು ಒಡೆದವರು ಮುಸ್ಲಿಂ ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರ, ಸಂಘಪರಿವಾರ ಗುರಿಯಾಗಿಟ್ಟುಕೊಂಡು ವಿವಿಧ ಪೋಸ್ಟರ್‌ಗಳ (Poster) ಪ್ರದರ್ಶನ ಮಾಡಲಾಗಿದೆ. ಇದನ್ನೂ ಓದಿ: ಚಿತ್ರದುರ್ಗ| ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ – 108 ಪ್ರಕರಣ ದಾಖಲು, 575 ಜೂಜುಕೋರರು ವಶಕ್ಕೆ
ಕೂಡಲೇ ಎಚ್ಚೆತ್ತ ಪೊಲೀಸರು, ಪ್ರತಿಭಟನೆಗೆ ಕಡಿವಾಣಹಾಕಿದರು. ಈ ಬಗ್ಗೆ ಮಾತನಾಡಿದ ಎಸ್‌ಡಿಪಿಐ ಮುಖಂಡರು, ದೇಶದಲ್ಲಿ ಮುಸ್ಲಿಂ ಪರಿಸ್ಥಿತಿ ಸರಿಯಲ್ಲ. ಮುಸ್ಲಿಮರ ಪರವಾಗಿ ಎಸ್‌ಡಿಪಿಐ ಧ್ವನಿಯಾಗಿದೆ. ಎಸ್‌ಡಿಪಿಐ ಬ್ಯಾನ್ ಮಾಡಲು ಆಗಲ್ಲ. ಬರೀ ಜಿಲ್ಲಾ ಪಂಚಾಯತಿ, ಪಾಲಿಕೆ ಅಷ್ಟೇ ಅಲ್ಲಾ ಮುಂದಿನ ಬಾರಿ ಎಂಎಲ್‌ಎ, ಎಂಪಿ ಸ್ಥಾನ ಸಹ ಗೆಲ್ಲುತ್ತೆವೆ. ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲಸಬೇಕು. ನಿಜವಾದ ಉಗ್ರರು ಇಸ್ರೇಲ್‌ನವರು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Explained: ಮುಂಬೈ ಪ್ಲೇಯಿಂಗ್ ಇಲೆವೆನ್‌ನಲ್ಲಿ ರೋಹಿತ್‌ಗೆ ಇಲ್ಲ ಸ್ಥಾನ
ಸಂಘಪರಿವಾರ ಅವಹೇಳನ ಮಾಡಿ ಪ್ಲೇ ಕಾರ್ಡ್ ಪ್ರದರ್ಶನ ಹಿನ್ನೆಲೆ ಹಿಂದೂಪರ ಸಂಘಟನೆಗಳು ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದೆ. ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂ ವಕೀಲರ ಸಂಘದಿಂದ ದೂರು ಕೊಡಲಾಗಿದೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್‌ಐಆರ್ ದಾಖಲು ಮಾಡುವಂತೆ ಆಗ್ರಹಿಸಿದ್ದಾರೆ. ಠಾಣೆಯ ಮುಂದೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಎಸ್‌ಡಿಪಿಐ ಬ್ಯಾನ್ ಮಾಡುವಂತೆ ಆಗ್ರಹಿಸಿದೆ. ಇದನ್ನೂ ಓದಿ: ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ – ಆಡಿಯೋದಲ್ಲಿ ಮಾತನಾಡಿರುವ ಪುಷ್ಪಾ ಯಾರು? ಹಿನ್ನೆಲೆ ಏನು?