ಮಂಡ್ಯ: ಶಿಲ್ಪಿಗಳು ಅಥವಾ ಸರ್ಕಾರಿ ದೇವಸ್ಥಾನಗಳ ಪುನರ್ ಸ್ಥಾಪನೆ ಕೆಲಸ ಮಾಡಬೇಕೆಂದರೆ ದೇವಾಲಯ ವಾಸ್ತು ಶಿಲ್ಪಕಲೆಯಲ್ಲಿ ಪದವಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ನಾವು ಕೆಲಸದಲ್ಲಿ ಎಷ್ಟೇ ಪರಿಣಿತರಾದರೂ ಪದವಿ ಪ್ರಮಾಣ ಪತ್ರವಿಲ್ಲದಿದ್ದರೇ ಕೆಲಸ ಮಾಡಲು ಅರ್ಹತೆ ಇರುವುದಿಲ್ಲ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ದೇವಾಲಯದ ಶಿಲ್ಪಕಲೆ ಪದವಿ ಕಾಲೇಜಿನ (Sculpture Degree College) ಅಗತ್ಯವಿದೆ ಎಂದು ಬಾಲರಾಮನ ಮೂರ್ತಿ ಕೆತ್ತನೆಯ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಹೇಳಿದ್ದಾರೆ.
Advertisement
ಮಂಡ್ಯ (Mandya) ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಶಿಲ್ಪಕಲೆಯ ನಾಡು ಕಲೆಗಳ ಬೀಡು ಎಂದು ನಮ್ಮ ರಾಜ್ಯವನ್ನು ಕರೆಯುತ್ತೇವೆ. ನಮ್ಮಲ್ಲಿ ದೇವಾಲಯ ವಾಸ್ತುಶಿಲ್ಪಕಲೆ ಕಾಲೇಜು ತೆರೆದು ಪದವಿ ನೀಡಿದರೆ ಅನೇಕ ಕೆಲಸಗಳು ನಮ್ಮ ಕರ್ನಾಟಕ ಜನಕ್ಕೆ ದೊರೆಯುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ – ವಿಜಯೇಂದ್ರ ಆಗ್ರಹ
Advertisement
Advertisement
ಶಿಲ್ಪಿಗಳು ಶತಮಾನಗಳಿಂದ ದೇಶಕ್ಕೆ, ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದೇವೆ. ಅದರಲ್ಲಿ ಅಗ್ರಗಣ್ಯರು ಅಮರಶಿಲ್ಪಿ ಜಕಣಾಚಾರ್ಯರು. ಅವರು ನಿರ್ಮಿಸಿರುವ ದೇವಾಲಯಗಳು ಇವತ್ತಿಗೂ ತನ್ನ ಕಲೆ ಮಾಸಿ ಹೋಗದಂತೆ ಅಸ್ತಿತ್ವ ಕಾಪಾಡಿಕೊಂಡಿವೆ. ಶಿಲ್ಪಿಗಳು ನಿರ್ಮಿಸುವ ವಿಗ್ರಹ ಅವರು ಸತ್ತ ನಂತರವೂ ಪೂಜೆಗೊಳಪಡುತ್ತವೆ. ನನಗೆ ಬೆಲೆ ಕೊಡುತ್ತಿರುವುದು ನಾನೊಬ್ಬ ಶಿಲ್ಪಿ ಎಂದೆಲ್ಲ, ನಾನು ಮಾಡಿದ ಕೆಲಸಕ್ಕೆ ಅದರ ಹಿಂದೆ ಇರುವ ಕಲೆ ಮತ್ತು ಶ್ರಮಕ್ಕೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: Bharat Mobility Global Expo | ವಿನೂತನ ವಾಹನಗಳ ವಿಶ್ವರೂಪವನ್ನೇ ನೋಡ್ತಿದ್ದೇನೆ: ಹೆಚ್‌ಡಿಕೆ
Advertisement
ಶ್ರಮದ ಜೀವನಕ್ಕೆ ಸಾರ್ಥಕತೆ ಇದೆ. ಅದಕ್ಕೆ ನಾನೇ ಉದಾಹರಣೆ, ಇವತ್ತಿನ ಆಧುನಿಕತೆ ವೈಜ್ಞಾನಿಕವಾಗಿ ಏಷ್ಟೇ ಮುಂದುವರಿದಿದ್ದರೂ, ಮಾಡಲು ಅಸಾಧ್ಯವಾದ ಕೆಲಸಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ