ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಗದಗದ ಶಿಲ್ಪಿಗೆ ಆಹ್ವಾನ

Public TV
1 Min Read
gadag Sculptor Ram Mandir

ಗದಗ: ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ನಿರ್ಮಾಣ ಕಾರ್ಯಕ್ಕೆ ಗದಗ (Gadag) ಜಿಲ್ಲೆಯ ಶಿಲ್ಪಿಯೋರ್ವನಿಗೆ (Sculptor) ಆಹ್ವಾನ ಬಂದಿದೆ.

gadag Sculptor Ram Mandir 2

ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಿ ನಾಗಮೂರ್ತಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಬರುವಂತೆ ಆಮಂತ್ರಣ ಬಂದಿದೆ. ನಾಗಮೂರ್ತಿ ಮೂಲತಃ ಕೊಪ್ಪಳ ಜಿಲ್ಲೆ ಕಾತರಕಿ ಗ್ರಾಮದ ನಿವಾಸಿ. ಮುಂಡರಗಿ ಪಟ್ಟಣದಲ್ಲಿ ಶಿಲ್ಪ ಕಲೆಯ ಶಾಪ್ ನಡೆಸುತ್ತಿದ್ದಾರೆ.

gadag Sculptor Ram Mandir 1

ಇವರು ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆಯಲ್ಲಿ ದೊರೆಯುವ (ಕೃಷ್ಣ ಶಿಲೆ) ಕರಿಕಲ್ಲುಗಳನ್ನು ಬಳಸಿ ಮೂರ್ತಿ ತಯಾರಿಸುತ್ತಿದ್ದರು. ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀಗಂಧ ಕಲಾ ಸಂಕಿರಣ ಕಲಾ ವಿದ್ಯಾಲಯ ವ್ಯಾಸಂಗ ಮಾಡಿದ್ದಾರೆ. ಐದಾರು ವರ್ಷಗಳಿಂದ ಶಿಲ್ಪ ಕಲೆಯ ಬಗ್ಗೆ ಮುಂಡರಗಿ ವೆಂಕಟೇಶ್ ಸುತಾರ ಎಂಬವರ ಹತ್ತಿರ ತರಬೇತಿ ಪಡೆದುಕೊಂಡು ಈಗ ತಾವೇ ಶಾಪ್ ಆರಂಭಿಸಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿಯಲ್ಲಿ ನಿರ್ಮಾಣವಾಗದ ಸ್ಕೈವಾಕ್ – ಜೀವ ಭಯದಲ್ಲಿ ರಸ್ತೆ ದಾಟುವ ಸಾರ್ವಜನಿಕರು

ಇವರ ಅದ್ಭುತ ಕಲಾ ಮೂರ್ತಿಗಳ ತಯಾರಿಕೆ ಗಮನಿಸಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಗೆ ಆಹ್ವಾನಿಸಲಾಗಿದೆ. ಸ್ಥಳೀಯರು ನಾಗಮೂರ್ತಿಯವರನ್ನು ಸನ್ಮಾನಿಸಿ ಗೌರವಿಸಿ ರಾಮ ಮಂದಿರ ಕಾರ್ಯಕ್ಕೆ ಕಳುಹಿಸಿದ್ದಾರೆ. ಈ ಸೌಭಾಗ್ಯ ಒದಗಿ ಬಂದಿರುವುದು ತುಂಬಾನೆ ಖುಷಿಯಾಗಿದೆ. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನನಗೆ ಆಹ್ವಾನ ಬಂದಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದಿದ್ದಾರೆ ನಾಗಮೂರ್ತಿ. ಇದನ್ನೂ ಓದಿ: ಕರ್ನಾಟಕದ ರೈತರಿಗೆ ಪ್ರಧಾನಿ ಮೋದಿ ವಿಶೇಷ ಪ್ಯಾಕೇಜ್ ಘೋಷಿಸಬೇಕು – ಸುಮಲತಾ ಮನವಿ

Share This Article