ಕಾರವಾರ: ಒಂದೆಡೆ ಆಳ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜುತ್ತಿರುವ ಬಣ್ಣ ಬಣ್ಣದ ಹತ್ತಾರು ಬಗೆಯ ಮೀನುಗಳು. ಕಡಲಾಳಕ್ಕೆ ಇಳಿದು ಅಲ್ಲಿನ ಜಲಚರಗಳನ್ನ ಕಣ್ಣಾರೆ ನೋಡುವ ಆಸೆ ಯಾರಿಗೆ ತಾನೆ ಇಲ್ಲ ಹೇಳಿ. ಇದಕ್ಕೆ ಹೇಳಿ ಮಾಡಿಸಿದಂತಿರುವ ರಾಜ್ಯದ ಏಕೈಕ ಸ್ಥಳ ಅಂದ್ರೆ ಅದು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪ. ಈಗಾಗಲೇ ಜಿಲ್ಲಾಡಳಿತ ಅಲ್ಲಿ ಸ್ಕೂಬಾ ಡೈವಿಂಗ್‍ಗೆ ಅವಕಾಶ ಮಾಡಿಕೊಡುವ ಮೂಲಕ ಪ್ರವಾಸೋದ್ಯಮಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಎರಡು ದಿನದ ರಾಜ್ಯ ಮಟ್ಟದ ಸ್ಕೂಬಾ ಉತ್ಸವವನ್ನ ನೇತ್ರಾಣಿಯಲ್ಲಿ ಆಯೋಜನೆ ಮಾಡುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.
Advertisement
ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲಾಡಳಿತವೇ ಖುದ್ದು ಸ್ಕೂಬಾ ಡೈವಿಂಗ್‍ನ್ನು ಆರಂಭಿಸಿದ್ದು, ಸಾಕಷ್ಟು ಪ್ರವಾಸಿಗರನ್ನು ಜಿಲ್ಲೆಯತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ದೇಶ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಕತ್ ಎಂಜಾಯ್ ಮಾಡಿದರು. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಸ್ಕೂಬಾ ಉತ್ಸವ ಆಯೋಜನೆ ಮಾಡಿದ್ದು, ನೂರಾರು ಸಂಖ್ಯೆಯಲ್ಲಿ ದೇಶ, ವಿದೇಶಗಳ ಪ್ರವಾಸಿಗರು ಮುರುಡೇಶ್ವರದ ನೇತ್ರಾಣಿ ನಡುಗಡ್ಡೆಯಲ್ಲಿ ಎಂಜಾಯ್ ಮಾಡಿದರು.
Advertisement
ನೇತ್ರಾಣಿ ದ್ವೀಪ ಪ್ರಾಕೃತಿಕವಾಗಿ ಸಾಕಷ್ಟು ವೈವಿಧ್ಯತೆಗಳನ್ನ ಹೊಂದಿದ್ದು, ಹಲವಾರು ಬಗೆಯ ಜಲಚರಗಳಿಗೆ ಸ್ಥಾನ ಒದಗಿಸಿದೆ. ಕರ್ನಾಟಕದಲ್ಲಿಯೇ ಹವಳದಂಡೆಯನ್ನು ಹೊಂದಿರುವ ಏಕೈಕ ಪ್ರದೇಶವಾಗಿರುವುದರ ಜೊತೆಗೆ ಅಪರೂಪದ ಸುಮಾರು 35ಕ್ಕೂ ಅಧಿಕ ಪ್ರಬೇಧಗಳ ಕಡಲಜೀವಿಗಳನ್ನು ಇಲ್ಲಿ ಗುರುತಿಸಲಾಗಿದೆ.
Advertisement
Advertisement
ಈ ಪ್ರದೇಶದಲ್ಲಿ ಸ್ವಚ್ಛ ನೀರು ಇರುವುದರಿಂದ ಸ್ಕೂಬಾ ಡೈವಿಂಗ್‍ಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ದೇಶ, ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಜಿಲ್ಲಾಡಳಿತ ಸ್ಕೂಬಾ ಡೈವಿಂಗ್‍ಗೆ ಅವಕಾಶ ಒದಗಿಸಿರುವುದರಿಂದ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ.
ಸ್ಕೂಬಾ ಡೈವಿಂಗ್‍ಗೆ ನೇತ್ರಾಣಿಯಂತಹ ಪ್ರದೇಶ ರಾಜ್ಯದಲ್ಲೆಲ್ಲೂ ಇಲ್ಲ. ಹೀಗಾಗಿ ವಿದೇಶಗಳಿಗೆ ತೆರಳುವ ಬದಲು ರಾಜ್ಯದಲ್ಲೇ ಇರುವ ಮುರುಡೇಶ್ವರಕ್ಕೆ ಆಗಮಿಸಿ, ಪ್ರವಾಸಿಗರು ಖುಷಿ ಪಡುತ್ತಿದ್ದಾರೆ.
ಎರಡು ದಿನಗಳ ಕಾಲ ನಡೆದ ಸ್ಕೂಬಾ ಡೈವಿಂಗ್ ಉತ್ಸವಕ್ಕೆ ಮುರುಡೇಶ್ವರದ ನೇತ್ರಾಣಿ ಅಡ್ವೇಂಚರ್ಸ್ ಸಂಸ್ಥೆ ಕೈಜೋಡಿಸಿದೆ. ಎರಡು ದಿನಗಳ ಕಾಲ ಸ್ಕೂಬಾ ಡೈವಿಂಗ್ ಮಾಡಲು ಬಂದ ಪ್ರವಾಸಿಗರನ್ನು ಮುರುಡೇಶ್ವರದಿಂದ ಅರಬ್ಬಿ ಸಮುದ್ರದಲ್ಲಿರುವ ನೇತ್ರಾಣಿ ನಡುಗಡ್ಡೆಗೆ ಯಾವುದೇ ತೊಂದರೆಗಳಾಗದಂತೆ ಕರೆದೊಯ್ದು ಪ್ರವಾಸಿಗರನ್ನು ಸಂತಸ ಪಡಿಸಿತು. ಸ್ಕೂಬಾ ಉತ್ಸವಕ್ಕೆ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ನೂರಾರು ಜನ ಸ್ಕೂಬಾ ಡೈವಿಂಗ್ ಮಾಡಲು ರಿಜಿಸ್ಟರ್ ಮಾಡಿಕೊಂಡಿಕೊಂಡಿದ್ದಾರೆ.