ಬೆಂಗಳೂರು: 2023-24ನೇ ಸಾಲಿನಲ್ಲಿ 5 ಗ್ಯಾರಂಟಿ ಯೋಜನೆಗಳಿಗೆ (Guarantee Schemes) SCSP-TSP ಹಣ ಬಳಕೆ ಮಾಡಲಾಗಿದೆ ಎಂದು ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಮಹದೇವಪ್ಪ (H.C. Mahadevappa), 5 ಗ್ಯಾರಂಟಿ ಯೋಜನೆಗಳಿಗೆ 11,144 ಕೋಟಿ ರೂ. SCSP-TSP ಹಣ ನೀಡಲಾಗಿದೆ. ಇದರಲ್ಲಿ 6162 ಕೋಟಿ ರೂ. SCSP-TSP ಹಣ ಖರ್ಚು ಮಾಡಲಾಗಿದೆ. ಇದರಲ್ಲಿ SCSP ಹಣ 4281.91 ಕೋಟಿ ರೂ. ಬಳಕೆ ಮಾಡಲಾಗಿದೆ. TSP ಹಣ 1880.11 ಕೋಟಿ ರೂ. ಬಳಕೆ ಮಾಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಬ್ರದರ್ಸ್‍ಗಳ ಬ್ರದರ್‌ರಿಂದ ಕುಕ್ಕರ್ ಹಂಚಿಕೆ – ಡಿಕೆಸುಗೆ ತಿವಿದ ಬಿಜೆಪಿ
Advertisement
Advertisement
SCSP-TSP ಅನುದಾನದಲ್ಲಿ ಗೃಹಲಕ್ಷ್ಮಿ- 5075 ಕೋಟಿ ರೂ. ಅನ್ನಭಾಗ್ಯ- 2779.50 ಕೋಟಿ ರೂ. ಗೃಹಜ್ಯೋತಿ- 2410 ಕೋಟಿ ರೂ. ಶಕ್ತಿ- 812 ಕೋಟಿ ರೂ. ಹಾಗೂ ಯುವನಿಧಿ- 67.50 ಕೋಟಿ ರೂ. ಬಳಕೆ ಮಾಡಲು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement
ಗೃಹಲಕ್ಷ್ಮಿಯಲ್ಲಿ SC ಸಮುದಾಯದ 21,74,519, ST 8,62,846 ಸಮುದಾಯ ಫಲಾನುಭವಿಗಳಿಗೆ ಹಣ ಕೊಡಲಾಗಿದೆ. ಅನ್ನಭಾಗ್ಯ SC-59,15,002, ST-25,90,678, ಯುವನಿಧಿಯಲ್ಲಿ SC-21986, ST-9220, ಗೃಹಲಕ್ಷ್ಮಿ SC-8,57,324, ST-3,68,997 ಜನರಿಗೆ ಅನುದಾನ ಹಂಚಿಕೆ ಆಗಿದೆ. ಶಕ್ತಿ ಯೋಜನೆಗೆ ಫಲಾನುಭವಿಗಳು ಗುರುತಿಸಿರೋದು ಕಷ್ಟ ಹೀಗಾಗಿ 812 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಸರ್ಕಾರದ ಈ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ಸರ್ಕಾರ ದಲಿತರ ದುಡ್ಡಿನಿಂದ ಗ್ರಾನೈಟ್ ತಂದು ದಲಿತರ ಸಮಾಧಿ ಕಟ್ಟಲು ಮುಂದಾಗಿದೆ. ಗ್ಯಾರಂಟಿಗೆ ಹಣ ಕೊಡೋದು ನಿಮ್ಮ ತೆವಲಿಗೆ ಮಾಡಿಕೊಂಡಿದ್ದೀರಾ ನೀವು ಮಾಡಿಕೊಳ್ಳಿ. ಅದಕ್ಕೆ ದಲಿತರ ಹಣ ಯಾಕೆ ಕೊಡ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮಹದೇವಪ್ಪಗೆ ಮಗಳ ಗಂಡ ಯಾರು? ಅಳಿಯ ಯಾರು ಗೊತ್ತಾಗುತ್ತಿಲ್ಲ. ಮಹದೇವಪ್ಪ ಪರಮಾತ್ಮ ಆಡಿಸಿದಂತೆ ಆಡುತ್ತಿದ್ದಾರೆ. ಆ ಪರಮಾತ್ಮ ಯಾರು ಎಂದು ನನಗೆ ಗೊತ್ತಿದೆ. ಮಹದೇವಪ್ಪ ಹಠ ಮಾಡಿ ಇದನ್ನ ಮಾಡುತ್ತಿದ್ದೀರಾ ಮಾಡಿ. ನಾನು ಛಲವಾದಿ ನಾನು ಇದನ್ನ ಇಲ್ಲಿಗೆ ಬಿಡೊಲ್ಲ. ಕಾಂಗ್ರೆಸ್ ಸರ್ಕಾರ ದಲಿತರ ಹಣ ಲೂಟಿ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ಯಾವ ಪರಮಾತ್ಮ ನನ್ನನ್ನು ಆಟ ಆಡಿಸೋಕೆ ಆಗೋದಿಲ್ಲ. ನಾನೇ ಪರಮಾತ್ಮನನ್ನ ಆಟ ಆಡಿಸ್ತೀನಿ. SCSP-TSP ಹಣ ಯಾವುದಕ್ಕೆ ಬಳಕೆ ಆಗಬೇಕು ಎಂದು ಕಾಯ್ದೆ ಮಾಡಲಾಗಿದೆ. ಅದರಂತೆ ಹಣ ಬಳಕೆ ಆಗ್ತಿದೆ. SCSP-TSP ಹಣ ಬೇರೆಯವರಿಗೆ ಖರ್ಚು ಮಾಡಲು ಆಗೊಲ್ಲ. ಕಾಯ್ದೆ ಪ್ರಕಾರ ಗ್ಯಾರಂಟಿಗೆ ಹಣ ನೀಡಲಾಗಿದೆ. SCSP-TSP ಕಾಯ್ದೆ ತಂದಿದ್ದೇ ನಾನು. 2011ರ ಜಾತಿಗಣತಿ ಪ್ರಕಾರ ಅನುದಾನ ಗ್ಯಾರಂಟಿ ಯೋಜನೆಗಳಿಗೆ ನೀಡಲಾಗಿದೆ. ಯಾರಿಗೂ ಅನ್ಯಾಯ ಆಗಿಲ್ಲ. ಯಾರಿಗೂ ಅನ್ಯಾಯ ಆಗಲು ಬಿಡೊಲ್ಲ ಎಂದಿದ್ದಾರೆ.
ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯ ನಡುವೆ ಗದ್ದಲ ನಡೆದು, ಬಳಿಕ ಅರ್ಧ ಗಂಟೆಗೆ ಚರ್ಚೆ ಮಾಡಿಕೊಡೋದಾಗಿ ಸಚಿವರು ಭರವಸೆ ಕೊಟ್ಟ ಬಳಿಕ ಗದ್ದಲ ನಿಲ್ಲಿಸಲಾಯಿತು. ಇದನ್ನೂ ಓದಿ: ಏನಿಲ್ಲಾ ಏನಿಲ್ಲಾ, ದಲಿತ ಯೋಜನೆಗಳ ಮಾಲೀಕ ನೀನಲ್ಲಾ – ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ