ತುಮಕೂರು: ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕೊಬ್ಬರಿ ಬಿಸ್ಕೆಟ್ ಹಂಚಲಾಗಿತ್ತು. ಈ ವೇಳೆ ಡಿ.ಸಿ ರಾಕೇಶ್ ಕುಮಾರ್ ತಿನ್ನುತ್ತಿದ್ದ ಬಿಸ್ಕೆಟ್ ಒಂದರಲ್ಲಿ ಸ್ಕ್ರೂ ಪತ್ತೆಯಾಗಿದೆ.
ಹೌದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತಿದ್ದ ಸಭೆಯಲ್ಲಿ ಮಯೂರ್ ಬೇಕ್ ಲ್ಯಾಂಡ್ ಎಂಬ ಬೇಕರಿಯಿಂದ ಕೊಬ್ಬರಿ ಬಿಸ್ಕೆಟ್ ತರಿಸಿ ಎಲ್ಲರಿಗೂ ಹಂಚಲಾಗಿತ್ತು. ಎಲ್ಲರೊಡನೆ ಡಿ.ಸಿ. ರಾಕೇಶ್ ಅವರು ಕೂಡ ಬಿಸ್ಕೆಟ್ ತಿನ್ನುತ್ತಿದ್ದರು. ಈ ವೇಳೆ ಬಿಸ್ಕೆಟ್ ಒಂದರಲ್ಲಿ ಸ್ಕ್ರೂ ಪತ್ತೆಯಾಗಿದೆ. ಸ್ಕ್ರೂ ಕಂಡ ತಕ್ಷಣ ಜಿಲ್ಲಾಧಿಕಾರಿಗಳು ಒಂದು ಕ್ಷಣ ಗಲಿಬಿಲಿಯಾದ್ರು. ಅಲ್ಲದೆ ಈ ಬಿಸ್ಕೆಟ್ ನನಗೆ ಸಿಕ್ಕಿದೆ ಓಕೆ ಆದರೆ ಇಂತಹ ತಿನಿಸುಗಳನ್ನು ಮಕ್ಕಳು ತಿಂದರೆ ಏನೂ ಗತಿ ಎಂದು ಗುಡುಗಿದ್ದಾರೆ.
Advertisement
Advertisement
ಈ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಕೇಶ್ ಅವರು, ಆಹಾರ ಸುರಕ್ಷತೆ ಕಾಯ್ದೆ ಪ್ರಕಾರ ಜಿಲ್ಲೆಯಲ್ಲಿರುವ ಎಲ್ಲಾ ಬೇಕರಿಗಳು ಹಾಗೂ ಆಹಾರ ಮಾರಾಟದ ಅಂಗಡಿಗಳು ತಾವು ತಯಾರಿಸುವ ಆಹಾರಗಳ ಗುಣಮಟ್ಟದ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ನೀಡಬೇಕು. ನಿನ್ನೆ ನಡೆದ ಘಟನೆಯಿಂದ ಎಚ್ಚೆತ್ತುಕೊಂಡು ಆಹಾರ ಸುರಕ್ಷತೆ ಅಧಿಕಾರಿಗಳಿಗೆ ಈ ಕುರಿತು ಪರಿಶೀಲನೆ ಮಾಡುವಂತೆ ಆದೇಶಿಸಿದ್ದೇನೆ. ಮುಂದೆ ಈ ತರಹದ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ, ಎಲ್ಲಾ ಬೇಕರಿ ಹಾಗೂ ತಿಂಡಿ ತಿನಿಸು ಅಂಗಡಿ ಮಾಲೀಕರಿಗೂ ಆಹಾರ ಗುಣಮಟ್ಟದ ವರದಿಯನ್ನು ಸಲ್ಲಿಸುವ ನಿಯಮವನ್ನು ಕಡ್ಡಾಯಗೊಳಿಸುತ್ತೇವೆ ಎಂದು ಹೇಳಿದರು.
Advertisement
ಬಿಸ್ಕೆಟ್ ತಯಾರು ಮಾಡಿದ್ದ ಮಯೂರ್ ಬೇಕ್ ಲ್ಯಾಂಡ್ ಬೇಕರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿ.ಸಿ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಮಯೂರ್ ಬೇಕ್ ಲ್ಯಾಂಡ್ ತಿನಿಸುಗಳನ್ನ ಜಪ್ತಿ ಮಾಡಿದ ಅಧಿಕಾರಿಗಳು ಬೇಕರಿಗೆ ಬೀಗಮುದ್ರೆ ಹಾಕಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews