ಹಾವೇರಿ: ಮನೆ ಮುಂದೆ ನಿಲ್ಲಿಸಿದ್ದ 14 ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೋ ಕಾರು (Scorpio Car) ಕಳ್ಳತನ ಮಾಡಿರುವ ಘಟನೆ ಹಾವೇರಿಯ (Haveri) ಸಿದ್ದಾರೋಢ ಕಾಲೊನಿಯಲ್ಲಿ ನಡೆದಿದೆ.
ಹಾಸನ ಮೂಲದ ಪ್ರಜ್ವಲ್ ಆರ್. ಎಂಬುವರಿಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ. KA-04 NB-0449 ಸಂಖ್ಯೆಯ ಸ್ಕಾರ್ಪಿಯೋ ಕಾರನ್ನ ಕಳ್ಳರು ಕದ್ದೊಯ್ದಿದ್ದಾರೆ. ಇದನ್ನೂ ಓದಿ: ಗೆಳತಿಯೊಂದಿಗೆ ಲಿವ್ ಇನ್‌ನಲ್ಲಿರಲು ಮನೆಯವರ ವಿರೋಧ – ರೈಲ್ವೆ ಹಳಿಗೆ ಹಾರಿ ಯುವಕ ಆತ್ಮಹತ್ಯೆ
ಹಾವೇರಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದ ಪ್ರಜ್ವಲ್, ತಮ್ಮ ಮನೆಯ ಮುಂದೆ ಡೋರ್ ಲಾಕ್ ಮಾಡಿ ನಿಲ್ಲಿಸಿದ್ದರು. ಡೋರ್ ಲಾಕ್ ಮುರಿದು ಸ್ಕಾರ್ಪಿಯೋ ಕಾರನ್ನ ಡೈರೆಕ್ಟರ್ ಮಾಡಿ ಖದೀಮರು ಕಳ್ಳತನ ಮಾಡಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ (Haveri Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರವಾರ | ನಡುರಸ್ತೆಯಲ್ಲೇ ನಗರಸಭೆ ಮಾಜಿ ಸದಸ್ಯನ ಬರ್ಬರ ಹತ್ಯೆ