ಬೆಂಗಳೂರು: ಕೊಲೆಯ ಬಳಿಕ ರೇಣುಕಾಸ್ವಾಮಿ (Renukaswamy Murder Case) ಮೃತದೇಹ ಸಾಗಿಸಲು ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಇದೀಗ ಶವ ಸಾಗಿಸಲು ನೆರವಾದ ಗ್ಯಾರೇಜ್ ಮಂಜನಿಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.
Advertisement
ಕೆಎ 03 ಎಂಯು 8821 ನಂಬರ್ ನ ಕಾರು ಆರ್.ಆರ್.ನಗರ ದರ್ಶನ್ (Challenging Star Darshan) ಅಭಿಮಾನಿ ಸಂಘದ ಅಧ್ಯಕ್ಷನ ಮನೆ ಬಳಿ ನಿಂತಿತ್ತು. ಬುಧವಾರ ರಾತ್ರಿಯೇ ಕಾರು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ತಂದಿದ್ದಾರೆ. ಈ ಕಾರು ಪುನಿತ್ ಎಂ.ಆರ್.ಎಂಬವರ ಹೆಸರಿನಲ್ಲಿದೆ. ಇದನ್ನೂ ಓದಿ: ದರ್ಶನ್ ವಿರುದ್ಧ ರೌಡಿ ಶೀಟ್? – ಗೃಹಸಚಿವ ಪರಮೇಶ್ವರ್ ಹೇಳಿದ್ದೇನು?
Advertisement
Advertisement
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಜೂನ್ 8 ರಂದು ಡಿ ಬಾಸ್ ಗ್ಯಾಂಗ್ ಅಪಹರಿಸಿ ಬೆಂಗಳೂರಿಗೆ ಕರೆತಂದಿದೆ. ಬಳಿಕ ಪಟ್ಟಣಗೆರೆ ಶೆಡ್‍ನಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿದೆ. ದೇಹಕ್ಕೆ ಸಿಗರೇಟ್‍ನಿಂದ ಸುಟ್ಟು, ಥಳಿಸಿ, ಮರ್ಮಾಂಗಕ್ಕೆ ಒದ್ದು ಭೀಕರವಾಗಿ ಹಲ್ಲೆಗೈದು ಕೊಲೆ ಮಾಡಿದೆ. ನಂತರ ಮೃತದೇಹ ಸಾಗಿಸಲು ಡಿ ಬಾಸ್ ಟೀಂ ಸಂಚು ರೂಪಿಸಿದೆ.
Advertisement
ಆಗ ದರ್ಶನ್ 30 ಲಕ್ಷ ರೂ. ನೀಡುತ್ತೇನೆ. ಮೃತದೇಹವನ್ನು ಎಲ್ಲಾದರೂ ಬಿಸಾಕಿ ಎಂದು ತನ್ನ ಆಪ್ತ ಪ್ರದೋಶ್‌ಗೆ ಸೂಚಿಸಿದ್ದಾರೆ. ಹೀಗಾಗಿ ಪ್ರದೋಶ್ ಮತ್ತಿತರರು ಸೇರಿ ದೇಹವನ್ನು ಬಿಳಿ ಬಣ್ಣದ ಮಹೀಂದ್ರ ಸ್ಕಾರ್ಪಿಯೋ ಕಾರಿನಲ್ಲಿ ತೆಗೆದುಕೊಂಡು ಹೋಗಿ ಸುಮ್ಮನಹಳ್ಳಿಯಲ್ಲಿರುವ ಸತ್ವ ಅಪಾರ್ಟ್‍ಮೆಂಟ್ ಮುಂಭಾಗದ ಮೋರಿ ಬಳಿ ಎಸೆದು ಹೋಗಿದ್ದಾರೆ.