ಕಾರವಾರ: ದ್ವಿಚಕ್ರ ವಾಹನ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಬ್ಯಾಟರಿಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡು ದ್ವಿಚಕ್ರ ವಾಹನವೊಂದು ಹೊತ್ತಿ ಉರಿದು ಸಂಪೂರ್ಣ ಭಸ್ಮವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸೋಮಾನಿ ವೃತ್ತದ ಬಳಿ ನಡೆದಿದೆ.
ಸ್ಥಳೀಯ ಟೌನಶಿಪ್ ನಿವಾಸಿಯೊಬ್ಬರು ಸೋಮಾನಿ ವೃತ್ತದ ಹತ್ತಿರವಿರುವ ಅಶೋಕ್ ಮೇಸ್ತ್ರಿ ಎಂಬವರ ಗ್ಯಾರೇಜಿಗೆ ದುರಸ್ತಿಗೆಂದು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ತಂದಿದ್ದರು.
Advertisement
ಮೆಕ್ಯಾನಿಕ್ ಅಶೋಕ್ ಮೇಸ್ತ್ರಿ ಅವರು ದುರಸ್ತಿ ಮಾಡುವ ಸಂದರ್ಭದಲ್ಲಿ ಬ್ಯಾಟರಿಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.