– ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಖಂಡನೆ; ಪಾಕ್‌ಗೆ ಕಪಾಳಮೋಕ್ಷ
– ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು
ಬೀಜಿಂಗ್: ಭಯೋತ್ಪಾದನೆ (Terrorism) ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಈಗ ಬಹುದೊಡ್ಡ ರಾಜತಾಂತ್ರಿಕ ಯಶಸ್ಸು ಸಿಕ್ಕಂತಾಗಿದೆ. ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ (SCO)ದ ಶೃಂಗ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಒಮ್ಮತವಾಗಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನ ಖಂಡಿಸಿವೆ. ಜೊತೆಗೆ ಭಯೋತ್ಪಾದನೆ ತಡೆಯುವ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಪ್ರಧಾನಿ ಮೋದಿ ಭಾಷಣದ ಬಳಿಕ ಎಸ್‌ಸಿಒ ಪಹಲ್ಗಾಮ್ ದಾಳಿ (Pahalgam Terror Attack) ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿತು. ದಾಳಿಯನ್ನು ಒಕ್ಕೊರಲಿನಿಂದ ಖಂಡಿಸಿದ್ದು, ಭಾರತಕ್ಕೆ ಬೆಂಬಲ ಸೂಚಿಸಿತು. 26 ಮಂದಿ ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು, ಎಸ್‌ಸಿಒ ಸದಸ್ಯ ರಾಷ್ಟ್ರಗಳು ಬಲವಾಗಿ ಖಂಡಿಸಿದವು. ಮೃತರು ಮತ್ತು ಗಾಯಗೊಂಡವರ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದವು. ಅಮಾನವೀಯ ದಾಳಿಯ ಅಪರಾಧಿಗಳು ಮತ್ತು ಪ್ರಾಯೋಜಕರನ್ನ ನ್ಯಾಯದ ಕಟಕಟೆಗೆ ತರಬೇಕು ಎಂದು ಒತ್ತಾಯಿಸಿದವು.
ಶೆಹಬಾಜ್ ಷರೀಫ್ ಸಭೆಯಲ್ಲಿ ಪಾಲ್ಗೊಂಡಿದ್ದಾಗಲೇ ಈ ಬೆಳವಣಿಗೆ ನಡೆದಿರುವುದು ಪಾಕಿಸ್ತಾನದ ಪ್ರಧಾನಿಗೆ (Pakistan PrimeMinister) ಕಪಾಳಮೋಕ್ಷ ಮಾಡಿದಂತಾಗಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್ ಆಪ್ತನಿಂದ ಜಾತಿ ಅಸ್ತ್ರ
ಡಬಲ್ ಸ್ಟ್ಯಾಂಡರ್ಡ್ ಸರಿಯಲ್ಲ; ಮೋದಿ
ಇನ್ನೂ ಎಸ್‌ಸಿಒ ಸಭೆಯಲ್ಲಿ ಪಾಕ್ ಪ್ರಧಾನಿ ಎದುರಲ್ಲೇ ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಸ್ತಾಪಿಸಿದ ನರೇಂದ್ರ ಮೋದಿ (Narendra Modi), ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ ಕೋರಿದರು. ಅಲ್ಲದೇ ಭಯೋತ್ಪಾದನೆಯ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್ ಸ್ವೀಕಾರಾರ್ಹವಲ್ಲ, ಎಸ್‌ಸಿಒ ಸದಸ್ಯ ರಾಷ್ಟ್ರಗಳು ಒಂದೇ ಧ್ವನಿಯಲ್ಲಿ ಹೇಳಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಇದನ್ನೂ ಓದಿ: ರಾಜತಾಂತ್ರಿಕ ಯಶಸ್ಸು – ಗಡಿಯಾಚೆಗಿನ ಭಯೋತ್ಪಾದನೆ ತಡೆಗೆ ಭಾರತಕ್ಕೆ ಚೀನಾ ಬೆಂಬಲ
ಇದಕ್ಕೂ ಮುನ್ನ, ಕಳೆದ 4 ದಶಕಗಳಿಂದಲೂ ಭಾರತ ಭಯೋತ್ಪಾದನೆಯಿಂದ ಬಳಲುತ್ತಿದೆ. ಈ ಭಯೋತ್ಪಾದನಾ ಪಿಡುಗಿಗೆ ಅನೇಕ ತಾಯಂದಿರು ತಮ್ಮ ಮಕ್ಕಳನ್ನ ಕಳೆದುಕೊಂಡಿದ್ದಾರೆ. ಇತ್ತೀಚಿನ ಪಹಲ್ಗಾಮ್ ದಾಳಿಯಲ್ಲಿ ನಾವು ಈ ಭಯೋತ್ಪಾದನೆಯ ಕೊಳಕು ಮನಸ್ಥಿತಿಯನ್ನ ನೋಡಿದ್ದೇವೆ. ಈ ಬಿಕ್ಕಟ್ಟಿನ ಸಮಯದಲ್ಲಿ ನಮ್ಮೊಟ್ಟಿಗೆ ನಿಂತ ಸ್ನೇಹಿತರಿಗೆ ನಾನು ಧನ್ಯವಾದ ಹೇಳುತ್ತೇನೆ. ಇದು ಕೇವಲ ಭಾರತದ ಆತ್ಮದ ಮೇಲಿನ ದಾಳಿಯಾಗಿರಲಿಲ್ಲ. ಬದಲಾಗಿ ಮಾನವೀಯತೆ ಮೇಲೆ ನಂಬಿಕೆಯಿಟ್ಟಿರುವ ಪ್ರತಿಯೊಂದು ದೇಶಕ್ಕೂ ಬಹಿರಂಗ ಸವಾಲಾಗಿತ್ತು. ಆದಾಗ್ಯೂ ಕೆಲ ದೇಶಗಳು ಭಯೋತ್ಪಾದನೆಗೆ ಬಹಿರಂಗ ಬೆಂಬಲ ನೀಡಿದವು, ಇದು ಎಷ್ಟು ಸರಿ? ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಪಾಕಿಸ್ತಾನ ಮ್ಯಾಪ್ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್ ದೋವಲ್
ಪ್ರತಿಯೊಂದು ದೇಶದ ಅಭಿವೃದ್ಧಿಗೆ ಭದ್ರತೆ, ಶಾಂತಿ ಮತ್ತು ಸ್ಥಿರತೆ ನಿರ್ಣಾಯಕವಾದದ್ದು. ಆದ್ರೆ ಈ ಬೆಳವಣಿಗೆಗೆ ಭಯೋತ್ಪಾದನೆ ಒಂದು ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಭಾರತ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತೊಡಗಿದ್ದು, ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕೆಂದು ಬಯಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಚೀನಾದಲ್ಲಿ ಪುಟಿನ್ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ