ಹೌದು, ವಿಶ್ವದಲ್ಲೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡುವ ರೊಬೋಟ್ ಒಂದು ಆವಿಷ್ಕಾರವಾಗುತ್ತಿದೆ. ತಂತ್ರಜ್ಞಾನವನ್ನ ಬಳಸಿ ಕೃತಕ ಗರ್ಭಧಾರಣೆ ಮಾಡಿಸುವ ಮೂಲಕ ಈ ರೊಬೋಟ್ (Robot) ಮಗುವಿಗೆ ಜನ್ಮ ನೀಡಲಿದೆ. ತಾಯಿಯ ಗರ್ಭದಲ್ಲಿ ಮಗು (Baby) ಬೆಳೆಯುವ ರೀತಿಯಲ್ಲಿಯೇ ಈ ಕೃತಕ ಗರ್ಭಧಾರಣೆ ನಡೆಯಲಿದೆ.
ಸಿಂಗಾಪುರದ (Singapura) ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಯಾಗಿರುವ ಡಾಕ್ಟರ್ ಜಾಂಗ್ ಕಿಫೆಂಗ್ ನೇತೃತ್ವದಲ್ಲಿ ಗುವಾಂಗ್ ಝೌ ಮೂಲದ ಕೈವಾ ಟೆಕ್ನಾಲಜಿ (Kaiva Technology) ಈ ರೊಬೋಟ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಮೂಲಗಳ ಪ್ರಕಾರ, ಸತ್ಯ ಈ ಸಂಶೋಧನೆ ಅಂತಿಮ ಹಂತದಲ್ಲಿದ್ದು, ಯಶಸ್ವಿಯಾದರೆ ಗರ್ಭಧಾರಣೆ ಮಾಡಬಹುದು ಎಂದು ತಿಳಿಸಿದೆ.
ಪ್ರಕ್ರಿಯೆ ಹೇಗೆ?
ತಾಯಿಯೊಬ್ಬಳು ಗರ್ಭಧರಿಸುವ ಹಾಗೆ ಈ ಪ್ರಕ್ರಿಯೆ ನಡೆಯುತ್ತದೆ. ಈ ರೊಬೋಟ್ ನ ಭ್ರೂಣದೊಳಗೆ ಅಮ್ನಿಯೋಟಿಕ್ ಎಂಬ ದ್ರವ ಇರುತ್ತದೆ. ಇದು ತಾಯಿಯ ಗರ್ಭದಲ್ಲಿರುವ ನೈಸರ್ಗಿಕ ದ್ರವದಂತೆ ವರ್ತಿಸುತ್ತದೆ.
ಮೊದಲಿಗೆ ಐವಿಎಫ್ (In vitro fertilization) ರೀತಿಯಲ್ಲಿ ಲ್ಯಾಬ್ ನಲ್ಲಿ ಅಂಡಾಣು ಮತ್ತು ವೀರ್ಯಾಣುಗಳ ಸಂಯೋಜನೆ ಮಾಡಲಾಗುತ್ತದೆ. ನಂತರ ಈ ಸಂಯೋಜನೆಯನ್ನ ಕೃತಕ ಗರ್ಭಾಶಯಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಗರ್ಭಕ್ಕೆ ಪೋಷಕಾಂಶವನ್ನು ಪೂರೈಕೆ ಮಾಡಲಾಗುತ್ತದೆ. ಫೀಡಿಂಗ್ ಟ್ಯೂಬ್ ಮೂಲಕ ಭ್ರೂಣಕ್ಕೆ ಅಗತ್ಯವಾದ ಪೋಷಕಾಂಶ, ಆಮ್ಲಜನಕ ಮತ್ತು ಹಾರ್ಮೋನುಗಳನ್ನು ಒದಗಿಸಲಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ಎಐ ನಿಯಂತ್ರಿತ ವ್ಯವಸ್ಥೆಯಾಗಿರುತ್ತದೆ.
ಇನ್ನು ರೊಬೋಟ್ ನಲ್ಲಿ ಸೆನ್ಸರ್ ಹಾಗೂ ಕ್ಯಾಮರಾಗಳು ಇರುತ್ತವೆ. ಇವುಗಳು ಭ್ರೂಣದ ಬೆಳವಣಿಗೆ, ತಾಪಮಾನ, ಹೃದಯಬಡಿತ ಮತ್ತು ಇತ್ಯಾದಿ ಚಟುವಟಿಕೆಗಳನ್ನು ದಿನದ 24 ಗಂಟೆಯೂ ಗಮನಿಸುತ್ತಿರುತ್ತವೆ. ಒಂದು ವೇಳೆ ಮಗುವಿನ ಬೆಳವಣಿಗೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ತಕ್ಷಣವೇ ಪತ್ತೆ ಹಚ್ಚಿ ಎಚ್ಚರಿಕೆ ನೀಡುತ್ತದೆ.
ಸುಮಾರು 9 ರಿಂದ 10 ತಿಂಗಳವರೆಗೆ ಗರ್ಭದಲ್ಲಿ ಮಗು ಬೆಳೆಯುತ್ತದೆ. ಮಗು ಸಂಪೂರ್ಣವಾಗಿ ಬೆಳೆದ ಮೇಲೆ ಅಥವಾ ಗರ್ಭಾವಧಿ ಮುಗಿದ ಮೇಲೆ ಸರ್ಜರಿ ಮಾದರಿಯಲ್ಲಿ ಮಗುವನ್ನು ಹೊರತೆಗೆಯಲಾಗುತ್ತದೆ. ಮಗು ಜನಿಸಿದ ತಕ್ಷಣ ಮಗುವನ್ನು ನವಜಾತ ಶಿಶುಗಳ ಆರೈಕೆ ಕೇಂದ್ರಕ್ಕೆ ಕಳಿಸಲಾಗುತ್ತದೆ.
ತಾಯಿಯೊಬ್ಬಳು ಯಾವುದೇ ನೋವಿಲ್ಲದೆ, ಸರ್ಜರಿ ಇಲ್ಲದೆ ಮಗುವನ್ನು ಪಡೆಯಬಹುದು. ಈ ರೊಬೋಟ್ ಅನ್ನು 20206ರೊಳಗೆ ಬಿಡುಗಡೆ ಮಾಡಲಾಗುತ್ತಿದ್ದು, ಇದರ ವೆಚ್ಚ 12 ರಿಂದ 13 ಲಕ್ಷ ಆಗಿರಲಿದೆ ಎಂದು ಮೂಲಗಳು ತಿಳಿಸಿದೆ.
ರೊಬೋಟ್ ಸಂಶೋಧನೆಯ ಉದ್ದೇಶ:
ಸಂತಾನ ಸಮಸ್ಯೆಯನ್ನು ಎದುರಿಸುತ್ತಿರುವ ದಂಪತಿಗಳಿಗೆ ಇದೊಂದು ಆಯ್ಕೆ. ಗರ್ಭಧರಿಸಲು ಭಯಪಡುವ ಮಹಿಳೆಗೆ ಇದೊಂದು ಸರಳ ಮಾರ್ಗ ಎನ್ನಬಹುದು. ಅನಿಕ ದಂಪತಿಗೆ ಗರ್ಭಧಾರಣೆಯಲ್ಲಿ ಕೆಲವು ತೊಂದರೆಗಳಿರುತ್ತವೆ. ಅದಲ್ಲದೆ ಚೀನಾದಲ್ಲಿ ಜನನ ಪ್ರಮಾಣ ಕಡಿಮೆ ಇರುವುದು ಈ ಸಂಶೋಧನೆಗೆ ಮೂಲ ಕಾರಣ. ಇನ್ನು ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಗೆ ಆರೋಗ್ಯ ಸಮಸ್ಯೆ, ಪ್ರಸವ ವೇದನೆ ಹಾಗೂ ಇನ್ನಿತರೆ ಅಪಾಯಗಳನ್ನು ತಪ್ಪಿಸಲು ಈ ಯಂತ್ರ ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಪ್ರಸವ ವೇದನೆಯಾಗುವಾಗ ತಾಯಿಯು ಸಾವನ್ನಪ್ಪುವ ಸಂಭವವಿರುತ್ತದೆ. ಅದಕ್ಕೆ ಸಾವಿನ ಅಪಾಯ ಹಾಗೂ ಅವಧಿಗೂ ಮುನ್ನ ಹೆರಿಗೆಯಾಗುವಾಗ ಉಂಟಾಗುವ ಅಪಾಯವನ್ನು ತಪ್ಪಿಸಬಹುದು ಎಂಬ ಉದ್ದೇಶದಿಂದ ಈ ಯಂತ್ರವನ್ನು ತಯಾರಿಸಲಾಗಿದೆ.
ಈ ರೊಬೋಟ್ ಸಂಶೋಧನೆಗೆ ಕೆಲವು ವಿರೋಧ ವ್ಯಕ್ತವಾಗಿದೆ:
ಈ ಕೃತಕ ಗರ್ಭಶದಲ್ಲಿ ಹುಟ್ಟುವ ಮಗು ನೈಸರ್ಗಿಕವಾಗಿ ಜನಿಸುವ ಮಗುವಿನಂತೆ ಇರುತ್ತದೆಯಾ? ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಜೊತೆಗೆ ಮಗು ಹಾಗೂ ತಾಯಿಯ ನಡುವಿನ ನೈಸರ್ಗಿಕ ಸಂಬಂಧ ಕಡಿಮೆಯಾಗುತ್ತದೆ. ಕಾನೂನು ಪ್ರಕಾರ ಮಗುವಿನ ತಾಯಿ ಯಾರಾಗುತ್ತಾರೆ? ಅದಲ್ಲದೆ ಮಗು ನೈಸರ್ಗಿಕ ಗರ್ಭಶಯದಲ್ಲಿ ಬೆಳೆಯದೆ ಯಾಂತ್ರಿಕ ವಾತಾವರಣದಲ್ಲಿ ಬೆಳೆಯುವುದರಿಂದ ಮಗುವಿನ ಮಾನಸಿಕ ಗುಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇನ್ನು ಕೆಲವರಿಗೆ ಸಂತಾನ ಸಮಸ್ಯೆ ಇದ್ದರೂ ಕೂಡ 12 ಲಕ್ಷ ರೂ. ಖರ್ಚು ಮಾಡಿ ಈ ರೊಬೋಟ್ ಅನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ರೊಬೋಟ್ ಕೇವಲ ಆರ್ಥಿಕವಾಗಿ ಸಬಲರಾದವರಿಗೆ ಮಾತ್ರ ಸಹಾಯ ಮಾಡುತ್ತದೆ. ಜೊತೆಗೆ ಸಮಾಜದಲ್ಲಿ ಈ ರೀತಿ ಮಗು ಜನಿಸುವುದರಿಂದ ತಾಯಿಯ ಬೆಲೆ ಹಾಗೂ ನೈಸರ್ಗಿಕ ಜನನದ ಅನುಭವ ತಾಯಿಗೆ ಇರುವುದಿಲ್ಲ. ಹೆಚ್ಚೆಂದರೆ ಸಂಪ್ರದಾಯ ಬದ್ಧ ಜನರು ಈ ತಂತ್ರಜ್ಞಾನವನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಈ ರೊಬೋಟ್ ಹಲವು ಅನುಕೂಲತೆ ಹಾಗೂ ಅನಾನುಕೂಲತೆಯನ್ನು ಹೊಂದಿದೆ.
ಚೀನಾದ ಕೈವಾ ಟೆಕ್ನಾಲಜಿ ಅಭಿವೃದ್ಧಿ ಪಡಿಸುತ್ತಿರುವ ಈ ಕೃತಕ ಗರ್ಭಧಾರಣ ರೊಬೋಟ್ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಮುಂದಿನ ದಿನಗಳಲ್ಲಿ ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರುವ ಸಾಧ್ಯತೆ ಇದೆ.