ಬೆಂಗಳೂರು: ಮಾನವ ಕಳ್ಳಸಾಗಣಿಕೆ ಪ್ರಕರಣದಲ್ಲಿ ನೀನು ಭಾಗಿಯಾಗಿದ್ದೀಯ ಅಂತ ಮಹಿಳಾ ವಿಜ್ಞಾನಿಗೆ ಬೆದರಿಕೆ ಹಾಕಿ ಆನ್‌ಲೈನ್ ವಂಚಕರು (Cyber Fraud) ಲಕ್ಷ ಲಕ್ಷ ಪೀಕಿದ ಪ್ರಕರಣ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಇತ್ತೀಚೆಗಷ್ಟೇ ಸಂಸದರ ಪತ್ನಿಗೆ ಮನಿಲ್ಯಾಂಡ್ರಿಂಗ್ ಮಾಡಿದ್ದೀರಿ ಎಂದು ಬೆದರಿಸಿ 14 ಲಕ್ಷ ರೂ. ಹಣ ಹಾಕಿಸಿಕೊಂಡಿದ್ದರು. ಅದೇ ರೀತಿ ಮಹಿಳಾ ವಿಜ್ಞಾನಿ ಐಐಎಸ್‌ಸಿಯ ನ್ಯೂ ಹೌಸಿಂಗ್ ಕಾಲೋನಿ ನಿವಾಸಿ ಡಾ.ಸಂಧ್ಯಾ ಅವರಿಗೆ ಬೆದರಿಸಿ ಲಕ್ಷ ಲಕ್ಷ ಹಣ ಹಾಕಿಸಿಕೊಂಡಿದ್ದಾರೆ. ಇದನ್ನೂ ಓದಿ: Kolar | ಲಾರಿ ಡಿಕ್ಕಿಯಾಗಿ ಮುರಿದು ಬಿದ್ದ ಸ್ಕೈವಾಕ್ – ಕಾರು ಜಖಂ
ಸೆ.16 ರಂದು ಸಂಧ್ಯಾ ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಮೊಬೈಲ್ ನಂಬರ್ ಬೇರೆ ಕಡೆಗಳಲ್ಲಿ ಬಳಸಲಾಗುತ್ತಿದೆ ಎಂದು ಹೇಳಿದ್ದ. ಬಳಿಕ 17 ಪ್ರಕರಣಗಳು ದಾಖಲಾಗಿವೆ ಎಂದು ಮೆಸೇಜ್ ಮಾಡಿದ್ದ. ಇದಾದ ಬಳಿಕ ಮತ್ತೊಬ್ಬ ಕರೆ ಮಾಡಿ ನೀವು ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಸಿದ್ದ. ಅಲ್ಲದೇ ಸುಪ್ರೀಂ ಕೋರ್ಟ್ ಕೆಲ ದಾಖಲೆಗಳನ್ನು ತೋರಿಸಿ, ನಿಮ್ಮನ್ನು ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡುತ್ತಾರೆ ಎಂದು ಬೆದರಿಕೆ ಹಾಕಿದ್ದ.
ಬಳಿಕ ಸಂಧ್ಯಾ ಅವರ ಬಳಿ 8.8 ಲಕ್ಷ ರೂ. ಹಣ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡಿಸಿಕೊಂಡಿದ್ದರು. ಈ ಸಂಬಂಧ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ FIR ದಾಖಲಾಗಿದ್ದು, ವಂಚಕರಿಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ