ಸಾಮಾನ್ಯವಾಗಿ ಕೆಲವರು ತಮ್ಮ ಮಗು ಇಂತಹ ದಿನವೇ ಜನಿಸಬೇಕು ಎಂದು ಇಷ್ಟ ಪಟ್ಟಿರುತ್ತಾರೆ. ಅಂದರೆ ತಮ್ಮ ಹುಟ್ಟುಹಬ್ಬದಂದು ಅಥವಾ ತಮ್ಮ ಮದುವೆ ವಾರ್ಷಿಕೋತ್ಸವದಂದು ಹುಟ್ಟಬೇಕು ಎಂದು ಆಸೆ ಪಟ್ಟಿರುತ್ತಾರೆ. ಆದರೆ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಹೆಚ್ಚು ಆರೋಗ್ಯವಾಗಿರುತ್ತಾರೆ ಎಂದು ಅಧ್ಯಯನ ಒಂದು ತಿಳಿಸಿದೆ.
ಯೂರೋಪಿಯನ್ ಕಾಲೇಜ್ ಆಫ್ ನ್ಯೂರೊಸೈಕೋಫಾರ್ಮಾಕಾಲಜಿ ಸುಮಾರು 366 ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ವೈಜ್ಞಾನಿಕವಾಗಿ ಪ್ರಶ್ನೆ ಕೇಳಿ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಮತ್ತು ಹೆಚ್ಚು ಲವಲವಿಕೆಯಿಂದ ಇರುತ್ತಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಡಿಸೆಂಬರ್ ತಿಂಗಳ ಮಕ್ಕಳು ಹೇಗೆ ಭಿನ್ನ ಎನ್ನುವುದಕ್ಕೂ ಅಧ್ಯಯನ ಕಾರಣಗಳನ್ನು ನೀಡಿದೆ. ಇದನ್ನೂ ಓದಿ: ಕೊನೆಗೂ ಯಶ್ ಕನಸು ನೆರವೇರಿತು-ತಂದೆಯಾದ ರಾಕಿಂಗ್ ಸ್ಟಾರ್
Advertisement
Advertisement
1. ತುಂಬಾ ಅಪರೂಪ: ಡಿಸೆಂಬರ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಹೆರಿಗೆಯಾಗುತ್ತದೆ. ಅದರಲ್ಲೂ ಡಿಸೆಂಬರ್ 24 ಮತ್ತು 25 ರಂದು ಮಕ್ಕಳ ಬರ್ತ್ ಡೇ ದಿನಾಂಕ ಬರುವುದು ಬಹಳ ಕಡಿಮೆ.
Advertisement
2. ಕಡಿಮೆ ಕೋಪ: ಬೇಸಿಗೆಯಲ್ಲಿ ಹುಟ್ಟಿದವರು ಯಾವಾಗಲೂ ಮೂಡಿಯಾಗಿ ಇರುತ್ತಾರೆ. ಆದರೆ ಚಳಿಗಾಲದಲ್ಲಿ ಹುಟ್ಟಿದವರು ಸ್ಥಿರವಾಗಿರುತ್ತಾರೆ. ನಿರ್ದಿಷ್ಟವಾಗಿ ಡಿಸೆಂಬರ್ ನಲ್ಲಿ ಹುಟ್ಟಿದವರ ಸ್ವಾಭಾವದಲ್ಲಿ ಕೋಪ ಸ್ವಲ್ಪ ಕಡಿಮೆ ಇರುತ್ತದೆ.
Advertisement
3. ಜಾಸ್ತಿ ಕಾಯಿಲೆ ಬರಲ್ಲ: ಕೊಲಂಬಿಯಾ ಯುನಿವರ್ಸಿಟಿ ಡಿಪಾರ್ಟ್ ಮೆಂಟ್ ಆಫ್ ಮೆಡಿಸಿನ್ ಸಂಶೋಧಕರು, ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ 1900 ಮತ್ತು 2000 ರ ನಡುವೆ ಜನಿಸಿದ ಸುಮಾರು 1.75 ದಶಲಕ್ಷ ರೋಗಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಅವರಲ್ಲಿ 1,668 ರೋಗಿಗಳಿಗೆ ಜನಿಸಿದ ತಿಂಗಳು, ಆಹಾರದ ಮೂಲಕ ಕಾಯಿಲೆ ಬರುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳಿನಲ್ಲಿ ಜನಿಸಿದ ಮಕ್ಕಳಲ್ಲಿ ಹೆಚ್ಚಾಗಿ ಕಾಯಿಲೆ ಕಂಡು ಬಂದಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಒಂದು ವಾಷಿಂಗ್ಟನ್ ಪೋಸ್ಟ್ ಚಾರ್ಟ್ ಸಿದ್ಧಪಡಿಸಿ ಮಾಹಿತಿಯನ್ನು ಉಲ್ಲೇಖಿಸಿದೆ.
4. ಆಯಸ್ಸು ಹೆಚ್ಚು: ಪ್ರತಿಯೊಬ್ಬ ತಂದೆ-ತಾಯಿ ಕೂಡ ನಮ್ಮ ಮಕ್ಕಳು ಸದಾ ಖುಷಿಯಾಗಿ ಜೀವನ ನಡೆಸಬೇಕು ಎಂದು ಬಯಸುತ್ತಿರುತ್ತಾರೆ. ಆದರಲ್ಲೂ ಡಿಸೆಂಬರ್ ನಲ್ಲಿ ಜನಿಸಿದ ಮಕ್ಕಳು 100 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಜರ್ಮನ್ ಜನಗಣತಿಯ ಪ್ರಕಾರ, ಡಿಸೆಂಬರ್ ಮತ್ತು ಜೂನ್ ತಿಂಗಳ ಜನನಕ್ಕೆ ಹೋಲಿಸಿದರೆ 105 ವರ್ಷ ಬದುಕು ಸಾಧ್ಯತೆ ಇದೆ ಎಂದು ಜರ್ನಲ್ ಆಫ್ ಏಜಿಂಗ್ ರಿಸರ್ಚ್ ಮೂಲಕ ತಿಳಿದು ಬಂದಿದೆ.
5. ಹುಡುಗರು ಎಡಗೈ ಬರಹಗಾರರು: ಅಕ್ಟೋಬರ್ ನಿಂದ ಫೆಬ್ರವರಿಯೊಳಗೆ ಜನಿಸಿದ ಗಂಡು ಮಕ್ಕಳು ಹೆಚ್ಚಾಗಿ ಎಡಗೈ ಬಳಸುತ್ತಾರೆ. ಬೇರೆ ತಿಂಗಳಿಗೆ ಹೋಲಿಕೆ ಮಾಡಿದರೆ ಡಿಸೆಂಬರ್ ನಲ್ಲಿ ಈ ಸಂಖ್ಯೆ ಜಾಸ್ತಿ.
6. ತರಗತಿಯಲ್ಲಿ ಕಿರಿಯರಾಗಿರುತ್ತಾರೆ: ಡಿಸೆಂಬರ್ ನಲ್ಲಿ ಹುಟ್ಟಿದ ಮಗು ಶಾಲೆಯ ಪ್ರಾರಂಭವಾದಾಗ ತರಗತಿಯಲ್ಲಿ ಎಲ್ಲರಿಗಿಂತ ಕಿರಿಯವರಾಗಿರುತ್ತಾರೆ ಒಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv