ಬೆಂಗಳೂರು: ಚಂದ್ರ ಅಂದ್ರೆ ಕಾಂತಿ, ಶ್ವೇತಾಂಬರ. ಅದೆಷ್ಟೋ ಪ್ರೇಮಕಾವ್ಯಗಳಿಗೆ ಸ್ಫೂರ್ತಿ ಚಂದ್ರ. ಹುಣ್ಣಿಮೆಯಲ್ಲಿ ಚಂದಮಾಮನನ್ನು ನೋಡುವುದೇ ಚೆಂದ.
ಕಳೆದ ವರ್ಷದ ಹಾಗೂ ದಶಕದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 26ರಂದು ಸಂಭವಿಸಿತ್ತು. 2020ರ ಪ್ರಥಮ ಚಂದ್ರಗ್ರಹಣ ಶುಕ್ರವಾರ ರಾತ್ರಿ ಸಂಭವಿಸುತ್ತಿದ್ದು, ಇದನ್ನು ತೋಳ (ಪೆನಂಬ್ರಲ್) ಚಂದ್ರಗ್ರಹಣ ಅಥವಾ ಅರೆನೆರಳಿನ ಗ್ರಹಣವೆಂದು ಕರೆಯುತ್ತಾರೆ.
Advertisement
Advertisement
ಅರೆ ನೆರಳಿನ ಚಂದ್ರಗ್ರಹಣ ಎಂದರೇನು?
ಭೂಮಿಯ ದಟ್ಟ ನೆರಳಿನ ಭಾಗವನ್ನು ಮುಟ್ಟದೆಯೇ ಚಂದ್ರ ಹೊರ ಬರುವುದನ್ನು ಅರೆನೆರಳಿನ ಚಂದ್ರಗ್ರಹಣ ಎನ್ನುತ್ತಾರೆ. ಈ ಗ್ರಹಣವು ಬೂದು ಬಣ್ಣದಲ್ಲಿ ಕಾಣಿಸುತ್ತದೆ. ಹೀಗಾಗಿ ತೋಳ ಗ್ರಹಣ ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ ಶೇ.90ರಷ್ಟು ಭಾಗ ಚಂದ್ರನ ಮೇಲ್ಮೈಯನ್ನು ಭೂಮಿಯ ನೆರಳಿನ ಹೊರಭಾಗ ಮಾತ್ರ ಆವರಿಸಿಕೊಳ್ಳಲಿದೆ.
Advertisement
ಗ್ರಹಣ ಕಾಣಿಸುವ ಸಮಯ:
ಶುಕ್ರವಾರ ರಾತ್ರಿ 10.30ರಿಂದ ಮುಂಜಾನೆ 2.30ರವರೆಗೆ ಅಂದ್ರೆ ಸುಮಾರು 4 ಗಂಟೆಗಳ ಕಾಲ ಗ್ರಹಣ ಸಂಭವಿಸಲಿದೆ. ಈ ಅವಧಿಯಲ್ಲಿ ಗ್ರಹಣವನ್ನು ನೋಡಬಹುದಾಗಿದೆ.
Advertisement
ಚಂದ್ರಗ್ರಹಣ ಎಲ್ಲೆಲ್ಲಿ ಕಾಣುತ್ತದೆ?
ಯೂರೋಪ್, ಆಫ್ರಿಕಾ, ಉತ್ತರ ಏಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕದ ಪೂರ್ವಭಾಗ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಆಕ್ರ್ಟಿಕ್‍ನಲ್ಲಿ ಗೋಚರಿಸಲಿದೆ. ಭಾರತದ ಎಲ್ಲಾ ಭಾಗಗಳಲ್ಲಿಯೂ ಕಾಣಿಸಿಕೊಳ್ಳಲಿದೆ. ಕರ್ನಾಟಕದ ಎಲ್ಲಾ ಕಡೆಯೂ ಗ್ರಹಣವನ್ನು ನೋಡಬಹುದಾಗಿದೆ. ಹಾಗೆ ಬೆಂಗಳೂರಿನ ಎಲ್ಲೆಡೆ ಈ ಕೌತುಕವನ್ನು ವೀಕ್ಷಿಸಬಹುದಾಗಿದೆ.
ಬರಿಗಣ್ಣಿನಿಂದ ನೋಡಬಹುದೇ?
ಆಗಸದಲ್ಲಿ ನಡೆಯಲಿರುವ ಗ್ರಹಣ ಜನರಲ್ಲಿ ಕುತೂಹಲದ ಜೊತೆ ಆತಂಕವನ್ನು ಮೂಡಿಸುತ್ತದೆ. ಆದರೆ ಸೂರ್ಯಗ್ರಹಣದಂತೆ ಚಂದ್ರಗ್ರಹಣ ಅಪಾಯಕಾರಿಯಲ್ಲ. ಇದನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಈ ನಭೋಮಂಡಲದ ಕೌತುಕವನ್ನು ಕಣ್ಣತುಂಬಿಕೊಳ್ಳಲು ಇಡೀ ಜಗತ್ತು ತುದಿಗಾಲ ಮೇಲೆ ನಿಂತಿದೆ. ಮುಂದಿನ ಸಂಪೂರ್ಣ ಚಂದ್ರಗ್ರಹಣ 2021ರ ಮೇ 26ರಂದು ಸಂಭವಿಸಲಿದೆ.