ಬೆಂಗಳೂರು: ಮೈಸೂರು ಸಿಎಸ್‍ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ನವದೆಹಲಿಯ ವಿಜ್ಞಾನ ಪ್ರಸಾರ್ ನೆರವಿನೊಂದಿಗೆ ಮೈಸೂರಿನಲ್ಲಿ ಇದೇ ಸೆಪ್ಟೆಂಬರ್ 20-21ರಂದು ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಮತ್ತು ನಾಳೆಯ ನಡೆಗಳು ಎನ್ನುವ ವಿಷಯದ ಬಗ್ಗೆ ರಾಜ್ಯ ಮಟ್ಟದ ಸಮಾವೇಶ ಆಯೋಜನೆಗೊಂಡಿದೆ.
ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಆಸಕ್ತರಾಗಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ವ್ಯಕ್ತಿಗಳು ಹಾಗೂ ಪ್ರಕಾಶಕರಿಗೆ ಕನ್ನಡದಲ್ಲಿ ವಿಜ್ಞಾನ ಸಂವಹನ ಕುರಿತು ಚರ್ಚಿಸಲು ಇದು ವೇದಿಕೆಯನ್ನು ಒದಗಿಸಲಿದೆ.
Advertisement
ಸಂವಹನಕಾರರ ವಿಚಾರಗಳು, ಸರ್ಕಾರಿ ಸಂಸ್ಥೆಗಳ ಕೊಡುಗೆ, ಮಾಧ್ಯಮಗಳ ಪಾತ್ರ, ಪತ್ರಿಕೆಗಳು ಹಾಗೂ ಪ್ರಕಾಶನ, ಸರ್ಕಾರೇತರ ಸಂಸ್ಥೆಗಳ ಕೊಡುಗೆ ಈ ವಿಚಾರದ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಸೆ.20ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ದೆಹಲಿಯ ವಿಜ್ಞಾನ ಪ್ರಸಾರ್ ನಿರ್ದೇಶಕ ಡಾ. ನಕುಲ್ ಪರಾಶರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿಜ್ಞಾನ ಸಂವಹನ ಚಳುವಳಿಯ ಬಗ್ಗೆ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಕೆಎಸ್‍ಎಂಎಸ್ ರಾಘವರಾವ್ ಭಾಗವಹಿಸಲಿದ್ದಾರೆ. ಡಾ. ಟಿವಿ. ವೆಂಕಟೇಶ್ವರನ್ ಅವರು ವಿಜ್ಞಾನ್ ಪ್ರಸಾರ್ ಬಗ್ಗೆ ಮಾತನಾಡಲಿದ್ದಾರೆ.
Advertisement
ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಈ ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ [email protected] ಸಂಪರ್ಕಿಸಬಹುದು.