ಬೆಂಗಳೂರು: ಕನ್ನಡದಲ್ಲಿ ಸೈನ್ಸ್ ಮತ್ತು ಟೆಕ್ನಾಲಜಿಯ ಸಾಹಿತ್ಯ ಹೆಚ್ಚಿಸುವ ಉದ್ದೇಶ ಹೊಂದಿರುವ ಅರಿಮೆ ತಾಣದ ಮೊದಲ ಹುಟ್ಟುಹಬ್ಬದ ಪ್ರಯುಕ್ತ, ಬಸವನಗುಡಿಯಲ್ಲಿರುವ ಲೇಖಕ ವಸಂತ ಶೆಟ್ಟಿಯವರ ಮುನ್ನೋಟ ಮಳಿಗೆಯಲ್ಲಿ ಭಾನುವಾರ ಮಾತುಕತೆಯನ್ನು ಆಯೋಜಿಸಲಾಗಿದೆ.
ತಾಣಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಇದರ ಮುಂದಿನ ಹೆಜ್ಜೆಗಳು, ಸವಾಲುಗಳು ಕುರಿತಾಗಿ ಈ ತಾಣ ನಡೆಸುತ್ತಿರುವ ಪ್ರಶಾಂತ ಸೊರಟೂರ ಮಾತನಾಡಲಿದ್ದಾರೆ.
Advertisement
ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಪರ ಚಿಂತನೆಯ ಪುಸ್ತಕಗಳಿಗೆಂದೇ ಮೀಸಲಾದ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಹತ್ತನೆಯ ಮಾತುಕತೆ ಕಾರ್ಯಕ್ರಮದ ಅಂಗವಾಗಿ ಪ್ರಶಾಂತ ಸೊರಟೂರ ಅವರು ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ.
Advertisement
ತಿಳಿಗನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಳನ್ನು ಹೊರತರುವುದು ಇಂದು ತುರ್ತಾಗಿ ಆಗಬೇಕಾದ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ‘ಅರಿಮೆ’ ಎಂಬ ಪೋರ್ಟಲ್ ಒಂದು ಪುಟ್ಟ ಹೆಜ್ಜೆಯಾಗಿದ್ದು, ಕಳೆದ ಒಂದು ವರ್ಷದಲ್ಲಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಗುರಿಗಳತ್ತ ಸಾಗುವ ಹಂಬಲ ಹೊಂದಿದೆ.
Advertisement
ಈ ಪೋರ್ಟಲ್ ನಲ್ಲಿ ವಿಜ್ಞಾನದ ಆಗುಹೋಗುಗಳ ಜತೆಗೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗಾಗಿ, ಪಠ್ಯಪುಸ್ತಕಗಳಿಗೆ ಪೂರಕವಾದ ಪಾಠಗಳನ್ನು ತಿಳಿಗನ್ನಡದಲ್ಲಿ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪದಗಳನ್ನು ಹೊಮ್ಮಿಸುವುದೂ ಈ ತಾಣದ ಉದ್ದೇಶವಾಗಿದ್ದು, ಇಲ್ಲಿಯವರೆಗೆ ಕಟ್ಟಲಾದ ಪದಗಳ ಪಟ್ಟಿಯನ್ನು ತಾಣದಲ್ಲಿ ಜನರ ಬಳಕೆಗಾಗಿ ಇರಿಸಲಾಗಿದೆ.
Advertisement
ಕಾರ್ಯಕ್ರಮ ನಡೆಯುವ ಸ್ಥಳ: ಮುನ್ನೋಟ ಪುಸ್ತಕ ಮಳಿಗೆ, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ, ಬೆಂಗಳೂರು.
ಸಮಯ: ಭಾನುವಾರ, 26.02.2017ರ ಬೆಳಿಗ್ಗೆ11.30.