ಉಡುಪಿ: ಒಂದು ವಾರಕ್ಕೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದ್ದು ಸೂರ್ಯನ ದರ್ಶನವಾಗಿದೆ. ಬೈಂದೂರು ಮತ್ತು ಕುಂದಾಪುರ ಭಾಗದಲ್ಲಿ ನದಿಯ ಮಟ್ಟ ನಿಧಾನವಾಗಿ ಇಳಿಕೆ ಆಗುತ್ತಿದೆ.
ಇಡೀ ಜಿಲ್ಲೆಯಲ್ಲಿ ಸೌಪರ್ಣಿಕಾ ನದಿತೀರದ ಜನ ಸಾಕಷ್ಟು ಸಂಕಷ್ಟ ಪಟ್ಟಿದ್ದರು. ನದಿ ದಾಟಿ ನೆರೆ ಇರುವ ಪ್ರದೇಶದ ಮಕ್ಕಳಿಗೆ ಜಿಲ್ಲಾಡಳಿತ ಶಾಲಾ-ಕಾಲೇಜನ್ನು ಕಡ್ಡಾಯ ಮಾಡಿಲ್ಲ. ಈ ಬಗ್ಗೆ ಸ್ಪಷ್ಟ ಆದೇಶವನ್ನು ಹೊರಡಿಸಿದೆ. ಆದರೂ ಬೈಂದೂರಿನ ಸಾಲ್ಬುಡ, ನಾಡ, ಬಡಾಕೆರೆ ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಮುಖ ನೋಡಿ ಒಂದು ವಾರ ಕಳೆದಿತ್ತು. ಪಂಚಾಯತ್ ಮತ್ತು ಸ್ಥಳೀಯರ ನೆರವಿನಿಂದ ದೋಣಿ ಹತ್ತಿಕೊಂಡು ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿ ಜೊತೆ ವಿದ್ಯಾರ್ಥಿನಿ ಅಶ್ವಿನಿ ಮಾತನಾಡಿ, 10 ದಿವಸಗಳಿಂದ ಮಳೆ ಬರುತ್ತಿದೆ. ಪ್ರತಿ ಮಳೆಗಾಲದಲ್ಲೂ ನಾವೆಲ್ಲ ದೋಣಿ ಬಳಸಿಯೇ ಕಾಲೇಜಿಗೆ ಹೋಗುತ್ತೇವೆ. ನದಿಯ ಮಟ್ಟ ನೋಡಿದರೆ ಇನ್ನೂ ಎರಡು ಮೂರು ದಿವಸ ನೆರೆ ಇಳಿಯಲು ಬೇಕಾಗಬಹುದು. ನಮ್ಮ ಕ್ಲಾಸ್ ಗಳು ಮುಖ್ಯ ಆಗಿರುವುದರಿಂದ ನಾವು ದೋಣಿಯಲ್ಲೇ ಕಾಲೇಜಿಗೆ ಹೋಗುತ್ತಿದ್ದೇವೆ ಎಂದರು. ಇದನ್ನೂ ಓದಿ: ನಷ್ಟದ ವರದಿ ಬಂದ ಮೇಲೆ ಕೇಂದ್ರಕ್ಕೆ ಪರಿಹಾರ ಕೇಳುವ ವಿಚಾರದಲ್ಲಿ ತೀರ್ಮಾನ: ಸಿಎಂ
Advertisement
Advertisement
ಪಶ್ಚಿಮಘಟ್ಟದಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ನದಿಯ ಮಟ್ಟ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ದಿನಕ್ಕೆ 30 ರಿಂದ 50 ಮೀಟರ್ ನಷ್ಟು ಮುಂದಿನ ಒಂದು ವಾರದಲ್ಲಿ ಪ್ರತಿದಿನ ಸೂರ್ಯ ಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.