ಬೆಂಗಳೂರು: ಕೊರೊನಾ ಮೂರನೇ ಅಲೆಯ ಹಿನ್ನೆಲೆ ಈಗಾಗಲೇ ನಗರದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದೀಗ ಜನವರಿ 29 ವರೆಗೂ ಶಾಲೆಗಳನ್ನು ತೆರೆಯದೆ ಇರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
Advertisement
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಬಿಟ್ಟು ಎಲ್ಲಾ ಕಡೆ ಯಥಾಸ್ಥಿತಿ ಶಾಲೆ ಮುಂದುವರಿಕೆಗೆ ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಜನವರಿ 29 ವರೆಗೂ ಶಾಲೆಗಳು ಕ್ಲೋಸ್ ಆಗಿರಲಿದ್ದು, ಬೆಂಗಳೂರು ಬಿಟ್ಟು, ಬೇರೆ ಎಲ್ಲ ಕಡೆ ಅಧಿಕಾರಿಗಳ ಅಭಿಪ್ರಾಯ ಪಡೆದು, ಪಾಸಿಟಿವ್ ರೇಟ್ ನೋಡಿಕೊಂಡು ಆರಂಭ ಅಗುತ್ತವೆ. ಬೆಂಗಳೂರಿನಲ್ಲಿ ಪಾಸಿಟಿವ್ ರೇಟ್ ಜಾಸ್ತಿ ಇದೆ ಹಾಗಾಗಿ ಶಾಲೆಗಳನ್ನು ತೆರಯದೆ ಇರಲು ತೀರ್ಮಾನಿಸಿದ್ದೇವೆ. ಮುಂದಿನ ಶುಕ್ರವಾರ ಮತ್ತೊಂದು ಸಭೆ ಕರೆದು ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ರದ್ದು – ಎರಡೇ ವಾರಕ್ಕೆ ಅಂತ್ಯ
Advertisement
Advertisement
29 ರಂದು ಮತ್ತೆ ಸಭೆ ಮಾಡಿ ಬೆಂಗಳೂರಿನಲ್ಲಿ ಶಾಲೆ ಪ್ರಾರಂಭದ ಬಗ್ಗೆ ತೀರ್ಮಾನ ಮಾಡುತ್ತೇವೆ. ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಮತ್ತು ಶಾಲೆಗಳಲ್ಲಿ ಸೋಂಕು ಅತಿ ಹೆಚ್ಚು ಕಂಡುಬಂದರೆ 7 ಅಥವಾ 3 ದಿನ ಕ್ಲೋಸ್ ಮಾಡಿ ಮತ್ತೆ ತೆರೆಯುವಂತಹ ನಿರ್ಣಯವನ್ನು ಜಿಲ್ಲೆಯ ಡಿಸಿ, ಬಿಇಓ, ಡಿಡಿಪಿಐಗಳಿಗೆ ನಿರ್ಧಾರ ಮಾಡಲು ಅಧಿಕಾರ ನೀಡಿದ್ದೇವೆ. ಈ ಹಿಂದೆ ಇರುವಂತೆ ಶಾಲೆಗಳ ಬಗ್ಗೆ ಜಿಲ್ಲೆಗಳಲ್ಲಿ ಡಿಸಿಗಳಿಗೆ ಅಧಿಕಾರ ಮುಂದುವರಿಕೆ ಮಾಡುತ್ತಿದ್ದೇವೆ ಶಾಲಾ ಹಂತದಲ್ಲಿ ಕೋವಿಡ್ ಬಂದ್ರೆ ಕ್ಲೋಸ್ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶೀಘ್ರವೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಪುನೀತ್ ನಿರ್ಮಾಣದ 3 ಸಿನಿಮಾಗಳು
Advertisement