ಬೆಂಗಳೂರು: ಸೋಮವಾರದಿಂದ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಕೋವಿಡ್ ಮೀಟಿಂಗ್ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸೋಮವಾರದಿಂದ 1 ರಿಂದ 9 ತರಗತಿ ಓಪನ್ ಆಗುತ್ತವೆ. ಸೋಮವಾರದಿಂದ ಎಲ್ಲ ತರಗತಿಗಳು ಓಪನ್ ಮಾಡಲಾಗುವುದು ಎಂದು ತಿಳಿಸಿದರು.
Advertisement
Advertisement
ರಾಜ್ಯದ ಬೇರೆ ಬೇರೆ ಶಾಲೆಗೆ ನೀಡಿರುವ ಕೋವಿಡ್ ನಿಯಮಗಳ ಪಾಲನೆಯಲ್ಲಿ ಶಾಲೆಗಳು ಆರಂಭವಾಗುತ್ತವೆ. ಕ್ಲಾಸ್ ನಲ್ಲಿ ಸೋಂಕು ಬಂದ್ರೆ ಆ ಕ್ಲಾಸ್ ಮಾತ್ರ ಬಂದ್ ಮಾಡಬೇಕು. ತರಗತಿ ಬಂದ್ ಮಾಡಿ ಶಾಲೆ ನಡೆಸಬೇಕು. ಯಾವುದಾದರೂ ಶಾಲೆಯಲ್ಲಿ ಪಾಸಿಟಿವ್ ಬಂದರೆ ತರಗತಿ ಮಾತ್ರ ಕ್ಲೋಸ್ ಮಾಡಬೇಕು. ಶಾಲೆಯಲ್ಲಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಡಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ನೈಟ್ ಕರ್ಫ್ಯೂ ರದ್ದು – ಸಿನಿಮಾಗೆ ಶೇ.50 ರಷ್ಟು ನಿರ್ಬಂಧ ಮುಂದುವರಿಕೆ