ಲಕ್ನೋ: ಹಿಂದೆ ನಡದಿದ್ದ ಲೈಂಗಿಕ ದೌರ್ಜನ್ಯದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ, 16 ವರ್ಷದ ಬಾಲಕಿಯೊಬ್ಬಳ ಮೇಲೆ 7 ಜನ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ (Uttar Pradesh) ಭೋಜಿಪುರ ಪ್ರದೇಶದ ಕೆಫೆಯೊಂದರಲ್ಲಿ ನಡೆದಿದೆ.
ಏ.2 ರಂದು ಬಾಲಕಿ ಶಾಲೆಗೆ ಹೋಗುತ್ತಿದ್ದಳು. ಈ ವೇಳೆ ಆರೋಪಿಗಳಲ್ಲಿ ಒಬ್ಬ ತನ್ನ ಬೈಕ್‌ನಲ್ಲಿ ಕೆಫೆಗೆ ಬರುವಂತೆ ಒತ್ತಾಯ ಮಾಡಿ ಕರೆದೊಯ್ದಿದ್ದ. ಅಲ್ಲಿ ಇತರ 6 ಮಂದಿ ಆರೋಪಿಗಳಿದ್ದರು. ಈ ವೇಳೆ ಹಿಂದೆ ಎಸಗಿದ್ದ ದೌರ್ಜನ್ಯದ ವಿಡಿಯೋ ತೋರಿಸಿ, ವೈರಲ್ ಮಾಡುವುದಾಗಿ ಬೆದರಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾದಲ್ಲಿ ಲವ್, ಮದ್ವೆ ಹೆಸರಲ್ಲಿ ಸೆಕ್ಸ್ – ವಿಡಿಯೋ ವೈರಲ್ ಮಾಡುವ ಬೆದರಿಕೆಯೊಡ್ಡಿ 150 ಗ್ರಾಂ ಚಿನ್ನ, 19 ಲಕ್ಷ ಪಡೆದು ವಂಚನೆ
ಆರೋಪಿಗಳನ್ನು ಅಸಾದ್ ಹೈದರ್ ಅಲಿಯಾಸ್ ಕರಣ್, ಚಂದ್, ರೆಸ್ಟೋರೆಂಟ್ ಮಾಲೀಕ ಸೈಫಿ, ಸಮೀರ್ ಅಹ್ಮದ್, ಬಂತಿ ಮತ್ತಿಬ್ಬರು ಸೇರಿದ್ದಾರೆ. ಇವರೆಲ್ಲರ ವಿರುದ್ಧ ಭೋಜಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರೆಸ್ಟೋರೆಂಟ್ ಮಾಲೀಕ ಸೈಫಿ ಮಾ.19 ರಂದು ಕೆಫೆ ಮೇಲಿನ ಕೋಣೆಗೆ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಮಯದಲ್ಲಿ ಕೃತ್ಯವನ್ನು ಚಿತ್ರೀಕರಿಸಿದ್ದ. ಯಾರಿಗಾದರೂ ಹೇಳಿದರೆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಏಪ್ರಿಲ್ 2 ರಂದು ಬಾಲಕಿ ಮಾರ್ಕ್ಸ್ ಕಾರ್ಡ್ ಪಡೆಯಲು ಶಾಲೆಗೆ ಹೋಗುತ್ತಿದ್ದಾಗ ಚಂದ್ ಅವಳನ್ನು ತಡೆದು, ಅಸದ್‌ನನ್ನು ಭೇಟಿಯಾಗದಿದ್ದರೆ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿ ಕರೆದೊಯ್ದಿದ್ದ. ಬಳಿಕ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು.
ಬಳಿಕ ದಾರಿಹೋಕನ ಸಹಾಯದಿಂದ ಬಾಲಕಿ ಮನೆಗೆ ಬಂದಿದ್ದಳು. ಭಯದಿಂದ ಎರಡು ದಿನಗಳ ಕಾಲ ತನ್ನ ಕುಟುಂಬಕ್ಕೆ ಘಟನೆಯ ಬಗ್ಗೆ ಹೇಳಿರಲಿಲ್ಲ. ಸಂಬಂಧಿಕರು ಆಕೆಯ ಆರೋಗ್ಯ ಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ ಈ ಬಗ್ಗೆ ತಿಳಿಸಿದ್ದಾಳೆ.
ಆರೋಪಿಗಳ ವಿರುದ್ಧ ಬಿಎನ್‌ಎಸ್ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO Case) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ – ಅತ್ಯಾಚಾರ ಬಳಿಕ ಬೆದರಿಕೆಯೊಡ್ಡಿ 70 ಸಾವಿರಕ್ಕೂ ಅಧಿಕ ಹಣ ಪೀಕಿದ್ದ ಸಮೀರ್

