ಕೊಪ್ಪಳ: ಪಾಠ ಹೇಳಬೇಕಾದ ಶಿಕ್ಷಕನೊಬ್ಬ ಗಂಗಾವತಿ ತಾಲೂಕಿನ ಹೊಸಳ್ಳಿಯ ಕಲ್ಮಠ ಗ್ರಾಮದಲ್ಲಿ ಮಕ್ಕಳಿಂದ ಮನೆ ಕೆಲಸ ಮಾಡಿಸಿಕೊಂಡಿದ್ದಾನೆ.
ದೈಹಿಕ ಶಿಕ್ಷಕನಾದ ಚಂದ್ರಶೇಖರ್ ಶಾಲೆಯಲ್ಲಿ ಓದುತ್ತಿರುವ ಆರನೇ ತರಗತಿ ಇಬ್ಬರು ವಿದ್ಯಾರ್ಥಿನಿಯರ ಕೈಯಲ್ಲಿ ಮನೆಯ ಬಟ್ಟೆಯನ್ನು ಒಗೆಸಿದ್ದಾನೆ. ಪುಟ್ಟ ಮಕ್ಕಳು ಬಟ್ಟೆ ಒಗೆದು ತಗೆದುಕೊಂಡು ಹೋಗುತ್ತಿರೋದನ್ನ ಹೊಸಳ್ಳಿಯ ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಶಿಕ್ಷಕ ಚಂದ್ರಶೇಖರ್‍ನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾಕೆ ಬಟ್ಟೆ ಒಗೆದಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿನಿಯರು, ಶಿಕ್ಷಕರೇ ನಮ್ಮನ್ನ ಬಟ್ಟೆ ಒಗೆಯಲು ಕಳುಹಿಸಿದ್ದರು. ನಂತರ ಅದನ್ನು ಮನೆಗೆ ಇಟ್ಟು ಬರಲು ಹೇಳಿದರು ಎಂದು ತಿಳಿಸಿದ್ದಾರೆ.
ಸೋಮವಾರ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ಶಾಲಾ ಮಕ್ಕಳನ್ನ ಕಂಪೌಂಡ್ ಕಟ್ಟಲು ಬಳಕೆ ಮಾಡಿಕೊಂಡಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಗಂಗಾವತಿಯಲ್ಲಿ ಶಿಕ್ಷಕರು ಇದೀಗ ಮಕ್ಕಳನ್ನ ಮನೆಗೆಲಸಕ್ಕೆ ಬಳಸಿಕೊಂಡಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ದೈಹಿಕ ಶಿಕ್ಷಕರಾದ ಚಂದ್ರಶೇಖರ್ ನಿನ್ನೆ ಬಟ್ಟೆ ಒಗೆಯಲು ಬಳಸಿಕೊಂಡಿದ್ದರ ಹೊರತಾಗಿಯೂ ಹೊಸಹಳ್ಳಿಯ ಬಹುತೇಕ ಶಿಕ್ಷಕರು ತಮ್ಮ ಮನೆ ಕೆಲಸಕ್ಕೆ ಮಕ್ಕಳನ್ನೇ ಬಳಸಿಕೊಳ್ಳುತ್ತಿದ್ದಾರೆ ಅನ್ನೊ ಆರೋಪವು ಕೇಳಿ ಬಂದಿದೆ. ಈ ಕುರಿತು ಚಂದ್ರಶೇಖರ್ ನನ್ನು ಕೇಳಿದ್ರೆ ಉದ್ದೇಶಪೂರ್ವಕವಾಗಿ ಮಾಡಿಸಿಲ್ಲ. ಮಕ್ಕಳು ಚಾವಿ ತರಲು ಬಂದಾಗ ಸ್ವಲ್ಪ ಬಟ್ಟೆ ತೆಗೆದುಕೊಂಡು ಹೋಗಲು ಹೇಳಿದೆ. ಅದು ತಪ್ಪು ನಾನು ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews