ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

Public TV
1 Min Read
BGK TEACHER STUDENT

-ಪೋಷಕರು ಶಾಲೆಗೆ ಬರುತ್ತಿದ್ದಂತೆ ಪರಾರಿಯಾದ ಶಿಕ್ಷಕ

ಬಾಗಲಕೋಟೆ: ಶಿಕ್ಷಕನೊರ್ವ ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಜೊತೆಗೆ ಅಸಭ್ಯವಾಗಿ ಮೆಸೇಜ್ ಮಾಡಿ ಪರಾರಿ ಆಗಿರುವ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಿಕ್ಷಕ ಮಲ್ಲಪ್ಪ ಬಸವರಾಜ್ ಡಂಗಿ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ. ಶಾಲೆಯ ಹತ್ತನೆ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದಲ್ಲದೇ ವಿದ್ಯಾರ್ಥಿನಿ ಮೊಬೈಲ್‍ಗೆ ಐ ಲವ್ ಯು, ಕಾಲ್ ಮಿ, ಅಪ್ಪು ಪ್ಲೀಜ್ ಹಾಗೂ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ.

ಶಿಕ್ಷಕ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನ್ನು ತಿಳಿದ ತಕ್ಷಣ ಪೋಷಕರು ಶಾಲೆಯಲ್ಲಿ ಸಾರ್ವಜನಿಕರ ಮುಂದೆಯೇ ಥಳಿಸಬೇಕು ಎಂದು ದೌಡಾಯಿಸಿದ್ದಾರೆ. ಆದರೆ ಪೋಷಕರು ಶಾಲೆಯತ್ತ ಬರುತ್ತಿರುವ ವಿಚಾರ ತಿಳಿಯುತ್ತಲೆ ಶಿಕ್ಷಕ ಮಲ್ಲಪ್ಪ ಪರಾರಿಯಾಗಿದ್ದಾನೆ. ಈ ಬಗ್ಗೆ ಪೋಷಕರು ಹಾಗೂ ಸ್ಥಳೀಯರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದು, ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯರು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಭರವಸೆಯ ನಂತರ ಪೋಷಕರು ಹಾಗೂ ಸ್ಥಳೀಯರು ಶಾಂತರಾಗಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *