– ಶಾಲೆಗೆ ಬಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು
ರಾಮನಗರ: ಸರ್ಕಾರಿ ಶಾಲೆಯ ಶಿಕ್ಷಕರು (Govt School Teachers) ವಿದ್ಯಾರ್ಥಿನಿಯರ ಜಡೆಯನ್ನು ಕತ್ತರಿಸಿದ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಅರಳಾಳುಸಂದ್ರ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಮಕ್ಕಳ ಜಡೆ ಕತ್ತರಿಸಿದ ವಿಚಾರ ತಿಳಿದು ಶಾಲೆಗೆ ಆಗಮಿಸಿದ ಪೋಷಕರು (Parents) ಗಲಾಟೆ ನಡೆಸಿ ಶಿಕ್ಷಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಅತಿಹೆಚ್ಚು ಸ್ಟಾರ್ಟಪ್‌ಗಳು ನೋಂದಣಿಯಾಗಿರುವ ಎರಡನೇ ರಾಜ್ಯ ಕರ್ನಾಟಕ
ಏನಿದು ಘಟನೆ?
ಶಾಲೆಗೆ ಬರುವಾಗ ಎರಡು ಜಡೆಗಳನ್ನು ಹಾಕಿಲ್ಲ ಎಂಬ ಕಾರಣಕ್ಕೆ ಶಾಲಾ ಶಿಕ್ಷಕರು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರ ಜಡೆಗಳನ್ನು ಕತ್ತರಿಸಿದ್ದಾರೆ.
ಮನೆಗೆ ತೆರಳಿದ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ತರಗತಿಯಲ್ಲಿ ನಡೆದ ಘಟನೆ ವಿವರಿಸಿದಾಗ ಸಿಟ್ಟಿಗೆದ್ದ ಪೋಷಕಕರು ಇಂದು ಬೆಳಗ್ಗೆ ಶಾಲೆಗೆ ಆಗಮಿಸಿ ಶಾಲೆಯ ಮುಖ್ಯ ಶಿಕ್ಷಕರನ್ನು ಹಾಗೂ ಕೂದಲು ಕತ್ತರಿಸಿದ ದೈಹಿಕ ಶಿಕ್ಷಕ ಶಿವಕುಮಾರ್, ಸಹಶಿಕ್ಷಕಿ ಪವಿತ್ರಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಾತನಾಡುವ ವೇಳೆ ಮೈಕ್ ಮ್ಯೂಟ್ – ಮಮತಾ ಆರೋಪ ಸುಳ್ಳೆಂದ ಪಿಐಬಿ ಫ್ಯಾಕ್ಟ್ ಚೆಕ್
ವಿಷಯ ತಿಳಿದು ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.