InternationalLatestMain Post

ಮೆಕ್ಸಿಕೋ ರಸ್ತೆಯಲ್ಲಿ ಗುಂಡಿನ ದಾಳಿ- 5 ವಿದ್ಯಾರ್ಥಿಗಳು ಸೇರಿ 6 ಜನರ ಹತ್ಯೆ

ಮೆಕ್ಸಿಕೋ: ಮಧ್ಯ ಮೆಕ್ಸಿಕೋದಲ್ಲಿ ರಸ್ತೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 5 ವಿದ್ಯಾರ್ಥಿಗಳು ಸೇರಿದಂತೆ 6 ಜನ ಮೃತಪಟ್ಟ ಘಟನೆ ನಡೆದಿದೆ.

ಮೆಕ್ಸಿಕೋದಲ್ಲಿ ನಡೆದ ಘಟನೆಯಲ್ಲಿ ವಿದ್ಯಾರ್ಥಿಗಳ ಗುಂಪಿನ ಮೇಲೆ ಬಂದೂಕುದಾರಿ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮವಾಗಿ ಮೂವರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಸೇರಿದಂತೆ ಅದೇ ಪ್ರದೇಶದಲ್ಲಿದ್ದ 65 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಗ್ವಾನಾಜುವಾಟೊ ರಾಜ್ಯದ ಪಟ್ಟಣದ ಮೇಯರ್ ಸೀಸರ್ ಪ್ರೀಟೊ ಮಾತನಾಡಿ, ಬ್ಯಾರನ್ ಸಮುದಾಯದಲ್ಲಿ 6 ಜನರು ಸಶಸ್ತ್ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದು, ಅವರ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ. ಈ ಬಗ್ಗೆ ಅಲ್ಲಿನ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಇದನ್ನೂ ಓದಿ: ಬಾಲಕಿಯರಿಗೆ ರೈಫಲ್ ತರಬೇತಿ, ಸೂಸೈಡ್ ಬಾಂಬ್ ತರಬೇತಿ ನೀಡಿದ್ದೆ – ಐಸಿಸ್ ಸೇರಿದ್ದ ಶಿಕ್ಷಕಿಯಿಂದ ತಪ್ಪೊಪ್ಪಿಗೆ

CRIME 2

ಎರಡು ವಾರಗಳ ಹಿಂದಷ್ಟೇ ಗ್ವಾನಾಜುವಾಟೊದಲ್ಲಿನ ಮತ್ತೊಂದು ಮಹಾನಗರವಾದ ಸೆಲಯಾದಲ್ಲಿನ ಎರಡು ಬಾರ್‌ಗಳು ಮತ್ತು ಲಾಡ್ಜ್‍ನಲ್ಲಿನ ಗ್ಯಾಂಗ್‍ಲ್ಯಾಂಡ್ ಪ್ರತೀಕಾರದ ದಾಳಿಯಲ್ಲಿ 8 ಮಹಿಳೆಯರು ಹಾಗೂ 3 ಪುರುಷರು ಹತ್ಯೆ ನಡೆದಿತ್ತು. ಡಿಸೆಂಬರ್ 2006ರಿಂದ ಫೆಡರಲ್ ಸರ್ಕಾರವು ಮಾದಕ ದ್ರವ್ಯ-ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಇದಾದ ಬಳಿಕ ಮೆಕ್ಸಿಕೋ 340,000ಕ್ಕಿಂತ ಹೆಚ್ಚು ಹತ್ಯೆಗಳು ನಡೆದಿವೆ. ಇದನ್ನೂ ಓದಿ: ಮೈಕ್‌ ದಂಗಲ್‌ – ಇಂದು ಬಿಜೆಪಿ ಮುಖಂಡರ ಮನೆ ಮುಂದೆ ಶ್ರೀರಾಮ ಸೇನೆಯಿಂದ ಪ್ರತಿಭಟನೆ

Leave a Reply

Your email address will not be published.

Back to top button