ಲಕ್ನೋ: ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು (Student) ಮುಖ್ಯ ಶಿಕ್ಷಕ (Principal) ತರಗತಿಯೊಂದರಲ್ಲಿ (Class) ಲಾಕ್ ಮಾಡಿ ಅವಳ ಇಚ್ಛೆಗೆ ವಿರುದ್ಧವಾಗಿ ಕೂದಲನ್ನು (Hair) ಕತ್ತರಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯ ನವಾಬ್ ಗಂಜ್ ಪ್ರದೇಶದ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎಲ್ಲಾ ವಿದ್ಯಾರ್ಥಿನಿಯರು 2 ಜಡೆಯನ್ನು ಹಾಕಿಕೊಂಡು ಶಾಲೆಗೆ ಬರಬೇಕು ಎಂಬ ನಿಯಮವಿತ್ತು. ಆದರೆ 9ನೇ ತರಗತಿಯ ವಿದ್ಯಾರ್ಥಿನಿಯು ಒಂದೇ ಜಡೆಯನ್ನು ಹಾಕಿಕೊಂಡು ಹೋಗಿದ್ದರಿಂದ ಮುಖ್ಯಶಿಕ್ಷಕ ಕೋಪಗೊಂಡಿದ್ದಾರೆ. ಅದಾದ ಬಳಿಕ ಆಕೆಯನ್ನು ಕೊಠಡಿಯೊಂದರಲ್ಲಿ ಬಂಧಿಸಿ ಶಿಕ್ಷೆಯಾಗಿ ಆಕೆಯ ಕೂದಲನ್ನು ಕತ್ತರಿಸಿದ್ದಾರೆ.
Advertisement
Advertisement
ಮುಖ್ಯಶಿಕ್ಷಕ ಈ ರೀತಿ ವಿದ್ಯಾರ್ಥಿನಿಯ ಕೂದಲನ್ನು ಕತ್ತರಿಸಿರುವುದು ಇದೇ ಮೊದಲಲ್ಲ. ಹಿಂದೆಯೂ ಇತರ ವಿದ್ಯಾರ್ಥಿನಿಯರ ಕೂದಲನ್ನು ಕತ್ತರಿಸಿದ್ದ ಎನ್ನುವ ಆರೋಪ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕಾಲ್ತುಳಿತಕ್ಕೆ 130 ಮಂದಿಯ ಸಾವಾಗಿದ್ದ ಇಂಡೋನೇಷ್ಯಾದ ಸ್ಟೇಡಿಯಂ ನೆಲೆಸಮಕ್ಕೆ ನಿರ್ಧಾರ
Advertisement
ಘಟನೆಗೆ ಸಂಬಂಧಿಸಿ ಮುಖ್ಯಶಿಕ್ಷಕರ ವಿರುದ್ಧ ವಿದ್ಯಾರ್ಥಿನಿ ಫರೂಕಾಬಾದ್ ಪೊಲೀಸರಿಗೆ ದೂರು ನೀಡಿದ್ದಾಳೆ. ಅಷ್ಟೇ ಅಲ್ಲದೇ ಮುಖ್ಯಶಿಕ್ಷಕನ ದುಷ್ಕೃತ್ಯಕ್ಕೆ ಶಿಕ್ಷೆಯಾಗದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿನಿ ಎಚ್ಚರಿಸಿದ್ದಾಳೆ.
Advertisement
ಘಟನೆಗೆ ಸಂಬಂಧಿಸಿ ಮುಖ್ಯ ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆ ಮತ್ತು ಐಪಿಸಿಯ ಇತರ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಮಾತನಾಡಿ, ಸದ್ಯಕ್ಕೆ ಮುಖ್ಯ ಶಿಕ್ಷಕ ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿ ಸದ್ಯದಲ್ಲೇ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ- ನೂರಾರು ಹೋರಾಟಗಾರರ ಬಂಧನ