ಯಾದಗಿರಿ: ಶಾಲೆಗೆ ಬರದೇ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಶಾಲೆ ಓಪನ್ ಆದ್ರೂ ಶಾಲೆ ಕಡೆ ಮುಖ ಮಾಡದ ವಿದ್ಯಾರ್ಥಿಗಳು, ಶಾಲೆಗೆ ಗೈರು ಕೂಲಿಗೆ ಹೋಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗುತ್ತಿದ್ದಾರೆ.
Advertisement
ಇಡೀ ಕ್ಲಾಸ್ ರೂಮ್‍ನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಆರನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ, ಏಳನೇ ತರಗತಿಯಲ್ಲಿ ನಾಲ್ಕು ಮಕ್ಕಳು ಇದ್ದರು. ಉಳಿದ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು,ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಸಂಬರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸ್ಥಿತಿಯನ್ನು,ಹೇಳೊರಿಲ್ಲ ಕೇಳೋರಿಲ್ಲ ಎಂಬುವಂತಾಗಿದೆ. ಅಮಿತ್ ಶಾಗೆ ವಿಶ್ ಮಾಡಿ ಟ್ರೋಲ್‍ಗೊಳಗಾದ ನಟಿ ಸಾರಾ ಅಲಿಖಾನ್
Advertisement
ಈ ಶಾಲೆಯಲ್ಲಿ ಸುಮಾರು 250 ಮಕ್ಕಳ ದಾಖಲಾತಿದ್ದು, 6 ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಶಾಲೆಗೆ ಬಂದ್ರೆ ಇನ್ನೂಳಿದ 49 ವಿದ್ಯಾರ್ಥಿಗಳು ಕೆಲಸಕ್ಕೆ ಹೋಗುತ್ತಿದ್ದಾರೆ. 7ನೇ ತರಗತಿಯಲ್ಲಿ 60 ಮಕ್ಕಳಿದ್ದು, ಇದರಲ್ಲಿ 4 ಜನ ವಿದ್ಯಾರ್ಥಿಗಳು ಶಾಲೆಗೆ ಬರ್ತಿದ್ದಾರೆ. ಹಲವಾರು ದಿನಗಳಿಂದ ಇದೆ ಪರಿಸ್ಥಿತಿ ನಡಿತೀದ್ರೂ ಶಿಕ್ಷಕರು ಫುಲ್ ಸೈಲಂಟ್ ಆಗಿದ್ದಾರೆ.
Advertisement
Advertisement
ಮಕ್ಕಳು ಕೂಲಿಗೆ ಹೋದ್ರು ಶಿಕ್ಷಣ ಇಲಾಖೆ ಮಾತ್ರ ಕಣ್ಮುಚ್ಚಿದೆ. ಮಕ್ಕಳ ಕೂಲಿ ಕೆಲಸವೇ ನೆಪಾವಗಿಟ್ಟುಕೊಂಡ ಟೀಚರ್ಸ್, ಕಾಟಾಚಾರಕ್ಕೆ ಶಾಲೆಗೆ ಬಂದು, ಹರಟೆ ಹೊಡೆದು ಮತ್ತೆ ಸಂಜೆ ಮನೆಯ ವಾಪಸ್ ಆಗತ್ತಾರೆ.
ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಇದು ಬಯಲಾಗಿದೆ. ಉರಿ ಬಿಸಿಲು, ಜಡಿ ಮಳೆಯನ್ನದೇ ದಿನವಿಡೀ ಮಕ್ಕಳು ಹತ್ತಿ ಹೊಲದಲ್ಲಿ ದುಡಿಯುತ್ತಿದ್ದಾರೆ. ಸ್ವತಃ ಪೋಷಕರೇ ಮಕ್ಕಳನ್ನು ಕೂಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಯಾದಗಿರಿ ಜಿಲ್ಲೆಯಾದ್ಯಂತ ಬಾಲ ಕಾರ್ಮಿಕರು ಹೆಚ್ಚುತ್ತಿದ್ದು, 150 ರೂ. ಕೂಲಿಗಾಗಿ ಈಡೀ ದಿನ ಶಾಲಾ ಮಕ್ಕಳು ದುಡಿವಂತಾಗಿದೆ.ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಸಂಬರ, ವಂಕಸಂಬರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಪೋಷಕರ ಒತ್ತಾಯಿಂದ ಕೂಲಿಗೆ ತೆರಳುತ್ತಿರುವ ವಿದ್ಯಾರ್ಥಿಗಳು ಶಾಲೆಯನ್ನು ನೆನದು ಕಣ್ಣೀರು ಹಾಕುತ್ತಿದ್ದಾರೆ. ಸರ್ ಶಾಲೆಗೆ ಹೋಗು ಅನ್ನಸತ್ತಿದೆ ಆದರೆ ಬಡತನ ಅದಕ್ಕೆ ಕೂಲಿಗೆ ಬಂದೆ. ನಮ್ಮ ಸರ್, ಗೆಳೆಯರು ನೆನಪಾಗುತ್ತಾರೆ, ಕೂಲಿ ಮಾಡೋಕೆ ಕಷ್ಟ ಆಗುತ್ತಿದೆ ಎಂದು ಪಬ್ಲಿಕ್ ಟಿವಿ ಕ್ಯಾಮರಾ ಎದುರು ಮುಗ್ಧ ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.