ಹೈದರಾಬಾದ್: ಶಾಲೆಯ ಫೀಸ್ ಕಟ್ಟಲು ಪೋಷಕರು ಲೇಟ್ ಮಾಡಿದ ಕಾರಣ ಮಕ್ಕಳನ್ನು ಕ್ಲಾಸ್ ರೂಮಿನಿಂದ ಹೊರಗಡೆ ಕೂರಿಸಿರುವ ಅಮಾನವೀಯ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸಿರಿಲಿಂಗಮ್‍ಪಲ್ಲಿಯ ಎಂಎನ್‍ಆರ್ ಎಂಬ ಖಾಸಗಿ ಶಾಲೆಯಲ್ಲಿ ನಡೆದಿದೆ.
ಶಿಕ್ಷಕರು ಇಬ್ಬರು ವಿದ್ಯಾರ್ಥಿನಿಯರು ಮತ್ತು ಓರ್ವ ವಿದ್ಯಾರ್ಥಿಯನ್ನು ಶಾಲೆಯ ಕಾರಿಡಾರ್ ನಲ್ಲಿ ಯೇ ಕೂರಿಸಿದ್ದಾರೆ. ಮಕ್ಕಳು 7 ಮತ್ತು 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬರೋಬ್ಬರಿ ಮೂರು ಗಂಟೆಗಳ ಕಾಲ ಹೊರಗಡೆ ಕುಳಿತಿದ್ದಾರೆ. ಈ ಮಕ್ಕಳು ಶಾಲೆಯ ಫೀಸ್ ತಡವಾಗಿ ಕಟ್ಟಿದ್ದು, ಇದಕ್ಕೆ ಫೈನ್ ಹಾಕಲಾಗಿತ್ತು. ಆದ್ರೆ ಫೈನ್ ಹಣ ಕಟ್ಟಿಲ್ಲವೆಂದು ಈ ರೀತಿ ಶೀಕ್ಷೆ ನೀಡಿದ್ದಾರೆ ಎಂದು ವರದಿಯಾಗಿದೆ.
Advertisement
ಮಕ್ಕಳನ್ನ ಈ ರೀತಿ ತರಗತಿಯಿಂದ ಹೊರಗೆ ಕೂರಿಸಿದ್ದು ಮಾನಸಿಕ ಅವಮಾನ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಮಕ್ಕಳ ಹಕ್ಕುಗಳ ಸಂಘದವರಾದ ಅಚ್ಯುತ್ ರಾವ್ ತಿಳಿಸಿದ್ದಾರೆ.
Advertisement
ಈ ಕುರಿತು ರಂಗಾರೆಡ್ಡಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಎಂಎನ್‍ಆರ್ ಶಾಲೆ ಮಕ್ಕಳ ಹಕ್ಕುಗಳನ್ನ ಉಲ್ಲಂಘನೆ ಮಾಡಿದೆ. ಈ ಕುರಿತು ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಒತ್ತಾಯಿಸಿದ್ದೇವೆ ಎಂದು ಅಚ್ಯುತ್ ರಾವ್ ಹೇಳಿದ್ದಾರೆ.
Advertisement
Students of a school in Telangana's Ranga Reddy say they were made to sit on the ground outside their classroom for not paying fees pic.twitter.com/GqK4dqW3gF
— ANI (@ANI) October 13, 2017