ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲವಡೆ ಧಾರಾಕಾರ ಮಳೆಯಾಗುತ್ತಿದೆ. ಹಲವೆಡೆ ಎಡೆಬಿಡದೆ ನಿಧಾನ ಗತಿಯಲ್ಲಿ ವರುಣ ಆರ್ಭಟಿಸುತಿದ್ದಾನೆ. ಹೀಗಾಗಿ ಹಲವೆಡೆ ಮನೆಗಳು, ಶಾಲೆಗಳಿಗೆ ಹಾನಿಯಿಂದ ಕೋಟೆನಾಡಿನ ಜನರಲ್ಲಿ ಆತಂಕಮನೆ ಮಾಡಿರುವ ಪರಿಣಾಮ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕವಿತ ಮನ್ನಿಕೇರಿ ಆದೇಶಿಸಿದ್ದಾರೆ.
Advertisement
ಎಡೆಬಿಡದೇ ಸುರಿಯಿತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ. ಹೀಗಾಗಿ ಚಿಕ್ಕ ಸಿಕ್ಕ ಮಕ್ಕಳು ಸಹ ಶಾಲೆಗೆ ಬರೋದು ಅಸಾಧ್ಯ ಎನಿಸಿದೆ. ಆದ್ದರಿಂದ ಎಚ್ಚೆತ್ತಿರುವ ಜಿಲ್ಲಾಧಿಕಾರಿ ಕವಿತಮನ್ನಿಕೇರಿ ಅವರು, ಮುಂಜಾಗ್ರತಾ ಕ್ರಮವಾಗಿ ಒಂದರಿಂದ ಹತ್ತನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- ಬೆಂಗಳೂರು ಸೇರಿ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ, ಅಲರ್ಟ್ ಆಗಿರಲು 13 ಜಿಲ್ಲೆಗಳಿಗೆ ಸೂಚನೆ
Advertisement
Advertisement
ಎರಡು ದಿನ ರಜೆ ಘೋಷಿಸಿರುವ ಡಿಸಿ ಕವಿತಾ ಮನ್ನಿಕೇರಿ, ಮಕ್ಕಳನ್ನು ನದಿದಂಡೆ ಹಾಗು ನೀರಿನ ಅಪಾಯವಾಗುವ ಸ್ಥಳಗಳಿಗೆ ಬಿಡದಂತೆ ಮನೆಗಳಲ್ಲಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಮೂಲಕ ಎಲ್ಲರು ಕ್ಷೇಮವಾಗಿರುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸತತ ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
Advertisement