ಪ್ರತಿಯೊಬ್ಬರ ಜೀವನದಲ್ಲಿಯೂ ಮೊದಲ ಪ್ರೀತಿ ಅದ್ಭುತವಾಗಿರುತ್ತದೆ. ಅದೇ ರೀತಿ ಲವ್ ಬ್ರೇಕ್ ಅಪ್ ಕೂಡ ಜೀವನದ ಪಾಠವನ್ನು ಕಲಿಸುತ್ತದೆ. ಫಸ್ಟ್ ಲವ್ ಬ್ರೇಕ್ ಅಪ್ ಅಲ್ಲಿ ಅದೆಷ್ಟೋ ಭಾವನೆಗಳಿರುತ್ತದೆ. ಅನೇಕ ಮಂದಿ ತಮ್ಮ ಶಾಲೆಯ ದಿನಗಳಲ್ಲಿಯೇ ಲವ್ ಬ್ರೇಕ್ ಅಪ್ ಅನುಭವವನ್ನು ಅನುಭವಿಸಿರುತ್ತಾರೆ. ಅದೇ ರೀತಿ ಹುಡುಗನೊಬ್ಬ ತನ್ನ ಪ್ರೀತಿಯನ್ನು ಮರಳಿ ಪಡೆಯಲು ಹುಡುಗಿಯ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
View this post on Instagram
ಈ ವೀಡಿಯೋವನ್ನು ಫಂಟಾಪ್ ಎಂಬ ಹೆಸರಿನ ಇನ್‍ಸ್ಟಾಗ್ರಾಮ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ವೀಡಿಯೋದಲ್ಲಿ ಹುಡುಗನೊಬ್ಬ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದ ಶಾಲಾ ಬಾಲಕಿಯ ಫುಟ್‍ಪಾತ್ ಮೇಲೆ ನಿಂತಿದ್ದಾಗ, ಆಕೆಯ ಹಿಡಿದುಕೊಂಡು ತನ್ನನ್ನು ಬಿಟ್ಟು ಹೋಗಬೇಡ, ನನ್ನನ್ನು ಕರೆದುಕೊಂಡು ಹೋಗು ಎಂದು ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಾಂಸಾಹಾರಿಗಳ ಓಟು ನಮಗೆ ಬೇಡ ಅಂತ ಬಿಜೆಪಿ ಹೇಳಲಿ – ದಿನೇಶ್ ಗುಂಡೂರಾವ್ ಸವಾಲ್
ಹುಡುಗಿಯ ಪಾದ ಹಿಡಿದು ಆಕೆಯ ಮನವೊಲಿಸಲು ಹುಡುಗ ಎಷ್ಟೇ ಪ್ರಯತ್ನಿಸುತ್ತಿದ್ದರೂ, ಆಕೆ ಮಾತ್ರ ಇಲ್ಲ ಎಂದು ತಲೆಯಾಡಿಸುತ್ತಿರುತ್ತಾಳೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 73 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 4,600ಕ್ಕೂ ಹೆಚ್ಚು ಲೈಕ್ಸ್ ಹರಿದುಬಂದಿದೆ. ಅಲ್ಲದೇ ಅನೇಕ ನೆಟ್ಟಿಗರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆ ಆತಂಕ – ಹೊರಗಿನಿಂದ ಬರುವ ಮಸೀದಿ, ಮದರಸಾ ಧರ್ಮಗುರುಗಳಿಗೆ ಅಸ್ಸಾಂನಲ್ಲಿ ಹೊಸ ನಿಯಮ