ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕು ಕುಮಾರಪಟ್ಟಣದ ಅಮೃತ ವರ್ಷಿಣಿ ವಿದ್ಯಾಲಯದ ಪ್ರಾಥಮಿಕ ತರಗತಿಗಳ ಸುಮಾರು 650 ಮಕ್ಕಳು ವಿಜ್ಞಾನ, ಸಮಾಜ, ಗಣಿತ, ಭಾಷೆ ಹಾಗೂ ಕಲೆಗಳಿಗೆ ಸಂಬಂಧಿಸಿದಂತೆ ವೈವಿಧ್ಯಮಯ ಪ್ರದರ್ಶಿಕೆಗಳೊಂದಿಗೆ ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಇಂದು ಅಣಿಗೊಳಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀಮತಿ ಸರ್ವಮಂಗಳ ಅರುಣಕುಮಾರ್ ಪೂಜಾರ ಅವರು ಕಾರ್ಯಕ್ರಮವನ್ನ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಪಿ.ಕೆ. ಪ್ರಕಾಶರಾವ್ ರವರು ಮಾತನಾಡಿ, ಇಂದಿನ ಮಕ್ಕಳು ಬರೀ ಪಠ್ಯ ಪುಸ್ತಕಗಳ ವಾಚನ ಮಾಡಿದರೆ ಸಾಲದು ಜೊತೆ ಜೊತೆಗೆ ಆಟ, ಪ್ರದರ್ಶನ, ಮನರಂಜನೆ ಕೂಡಾ ಮುಖ್ಯವಾದುದು. ಇಂದಿನ ವಸ್ತು ಪ್ರದರ್ಶನ ಮಕ್ಕಳಿಗೆ ಅನೇಕ ಕೂತೂಹಲಕಾರಕ ಪ್ರಯೋಗಗಳು, ಬಗೆ ಬಗೆಯ ಪೇಪರ ಕಟಿಂಗ್ ಗಳ ಬಗೆಗೂ ಬೆಳಕು ಚಲ್ಲಿದವು. ಮಕ್ಕಳಲ್ಲಿ ನಾವು ಕುತೂಹಲತೆಯನ್ನು ಬೆಳೆಸಬೇಕು. ಅವರಲ್ಲಿ ಅದು ಹೇಗೆ? ಇದು ಹೇಗಾಗುತ್ತದೆ? ಅದರಿಂದ ಏನು ಪ್ರಯೋಜನ? ಎಂಬಂತೆ ಕೂತೂಹಲಕಾರಿಕ ಪ್ರಶ್ನೆಗಳು ಎದ್ದರೆ ಅವರಿಗೆ ಪಠ್ಯ ಪುಸ್ತಕಗಳ ಕಡೆಗೆ ಗಮನ ನೀಡುವರು. ಆ ನಿಟ್ಟಿನಲ್ಲಿ ಈ ತರದ ಪ್ರಯೋಗಾತ್ಮಕ ಪ್ರದರ್ಶನಗಳು ವೀಕ್ಷಿಸುವದು ಮಕ್ಕಳಿಗೆ ಬಹು ಉಪಯೋಗ. ಅವರಲ್ಲಿ ಉತ್ಸುಕತೆ ಬೆಳೆಯುವದಲ್ಲದೇ ಸಾಂಸ್ಕøತಿಕವಾಗಿಯೂ ಕೂಡ ಬೆಳೆಯಬಲ್ಲರು ಎಂದು ಅಭಿಪ್ರಾಯಪಟ್ಟರು.
Advertisement
Advertisement
ಪ್ರದರ್ಶನದಲ್ಲಿ ಶಿಲಾಯುಗದ ಗುಹೆ, ಶಕ್ತಿಯ ಬಳಕೆ, ನೀರಿನ ಸದುಪಯೋಗ, ಜಾಗತಿಕ ಉಷ್ಣತೆಯಲ್ಲಿ ಏರಿಕೆ, ಪ್ರಕೃತಿಯಲ್ಲಿ ಸಮತೋಲನ, ಕರ್ನಾಟಕದ ಸಂಗೀತೋಪಕರಣಗಳು ಹಾಗೂ ಮಹಾನ್ ಗಾಯಕರು ಮೊದಲಾದ ವಿಷಯಗಳನ್ನು ಪ್ರಸ್ತುತಗೊಳಿಸಲಾಯಿತು. ದಿನವಿಡೀ ಯೋಜಿತಗೊಂಡಿದ್ದ ವಸ್ತುಪ್ರದರ್ಶನಕ್ಕೆ ಪೋಷಕರು ಹಾಗೂ ಆಮಂತ್ರಿತರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿದರು.
Advertisement
ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಪಿ.ಕೆ. ಪ್ರಕಾಶರಾವ್, ಕಾರ್ಯದರ್ಶಿ ವಿನಯ್ ರಾವ್, ಪ್ರಾಂಶುಪಾಲೆ ಶ್ರೀಮತಿ ಚೇತನಾ ವಿ. ರಾವ್, ಅಲ್ಲದೆ ಶಾಲಾ ಶಿಕ್ಷಕ ಶಿಕ್ಷಕಿಯರು ಪರಿಸರ ಪ್ರೇಮಿ ಡಾ. ಜಿ ಜೆ ಮೆಹೆಂದಳೆ, ಪಂಚಾಯತ್ ಉಪಾಧ್ಯಕ್ಷರಾದ ದಿನೇಶ ಹರಳಳೆಪ್ಪನವರು ಉಪಸ್ಥಿತರಿದ್ದರು.