ವಾಷಿಂಗ್ಟನ್: ಕೇರಳದ (Kerala) ಕಾಸರಗೋಡಿನಲ್ಲಿ ಬೀಡಿ ಕಟ್ಟುವ ಕೆಲಸ ಹಾಗೂ ಮನೆಗೆಲಸ ಮಾಡಿಕೊಂಡು ಇರುತ್ತಿದ್ದ ಸುರೇಂದ್ರನ್ ಕೆ. ಪಾಟೀಲ್ (Surendran K Pattel) ಅವರು ಇತ್ತೀಚೆಗಷ್ಟೇ ಅಮೆರಿಕದ (America) ಟೆಕ್ಸಾಸ್‍ನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ಸುರೇಂದ್ರನ್ ಅವರು ಆರ್ಥಿಕ ಸಮಸ್ಯೆಯಿಂದಾಗಿ 10ನೇ ತರಗತಿಯ ನಂತರ ಶಾಲೆ (School) ತೊರೆದರು. ಅಷ್ಟೇ ಅಲ್ಲದೇ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಹಾಗೂ ಬೀಡಿ ಕಟ್ಟುವ ಕೆಲಸವನ್ನು ಪ್ರಾರಂಭಿಸಿದರು.
Advertisement
Advertisement
ಒಂದು ವರ್ಷಗಳ ಕಾಲ ದಿನಗೂಲಿಯಾಗಿ ಬೀಡಿಗಳನ್ನು ಸುತ್ತುತ್ತಾ ದಿನಗಳನ್ನು ಕಳೆಯುತ್ತಿದ್ದರು. ಆದರೆ ತಮ್ಮ ಜೀವನವನ್ನು ತಾವೇ ಬದಲಾಯಿಸಿಕೊಳ್ಳಬೇಕು ಎಂದು ನಿರ್ಧರಿಸಿದ ಸುರೇಂದ್ರನ್ ಅವರು ಕಾನೂನು ಪದವಿ ಸೇರಿದಂತೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಬೇಕು ಎಂದು ದೃಢ ಸಂಕಲ್ಪವನ್ನು ಮಾಡಿದರು.
Advertisement
ಅದಾದ ಬಳಿಕ ತಮ್ಮ ಸಾಧನೆ ಶಿಖರವನ್ನು ಏರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಶಿಕ್ಷಣವನ್ನು ಪೂರ್ಣಗೊಳಿಸಲು ಸ್ನೇಹಿತರ ಬಳಿ ಹಣದ ಸಹಾಯವನ್ನು ಕೋರಿದರು. ಅಷ್ಟೇ ಅಲ್ಲದೇ ಸ್ಥಳೀಯ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಳ್ಳುತ್ತಾ ಅಧ್ಯಯನವನ್ನು ಮುಂದುವರಿಸಿದರು. ಎಷ್ಟೇ ಕಷ್ಟಗಳಿದ್ದರೂ ಅದರ ಬಗ್ಗೆ ಚಿಂತಿಸದೇ ತಮ್ಮ ಗುರಿಯಾಗಿದ್ದ ಎಲ್‍ಎಲ್‍ಬಿಯನ್ನು ಮುಗಿಸಿದರು. ಎಲ್‍ಎಲ್‍ಬಿಯನ್ನು ಮುಗಿಸಿದ ಬಳಿಕ ಅವರು ಪ್ರ್ಯಾಕ್ಟಿಸ್‍ಗಾಗಿ ಅಮೆರಿಕಕ್ಕೆ ತೆರಳಿದರು. ಅಲ್ಲಿಂದ ಮುಂದಿನ ಪಯಣವು ಯಾವುದೇ ಅಡಚಣೆಗಳಿಲ್ಲದೇ ಸಾಗಿತು. ಇದನ್ನೂ ಓದಿ: ತನ್ನ ಮೇಲೆ ಅತ್ಯಾಚಾರಗೈದ ಆರೋಪಿಯ ತಾಯಿಯ ಮೇಲೆ ಶೂಟೌಟ್, ಅಪ್ರಾಪ್ತೆ ಅರೆಸ್ಟ್
Advertisement
ಈ ಬಗ್ಗೆ ಸುರೇಂದ್ರನ್ ಅವರು ಮಾತನಾಡಿ, ಟೆಕ್ಸಾಸ್‍ನಲ್ಲಿ ಈ ಸ್ಥಾನಕ್ಕೆ ಸ್ಪರ್ಧಿಸುವಾಗ ಉಚ್ಛಾರಣೆಯ ಬಗ್ಗೆ ಅನೇಕರು ನಕಾರಾತ್ಮಕ ಕಮೆಂಟ್ ಮಾಡಿ ನನ್ನ ವಿರುದ್ಧ ಪ್ರಚಾರ ಮಾಡಿದರು. ನಾನು ಡೆಮಾಕ್ರಟಿಕ್ ಪ್ರೈಮರಿಗೆ ಸ್ಪರ್ಧಿಸಿದಾಗ ನನ್ನ ಪಕ್ಷವೇ ನಾನು ಗೆಲ್ಲಬಹುದೆಂದು ಭಾವಿಸಿರಲಿಲ್ಲ. ಅಷ್ಟೇ ಅಲ್ಲದೇ ನಾನು ಸಾಧಿಸುತ್ತೇನೆ ಎಂದು ಯಾರೂ ನಂಬಲಿಲ್ಲ. ಆದರೆ ನಾನು ಸಾಧಿಸಿದ್ದೇನೆ. ನಿಮ್ಮ ಭವಿಷ್ಯವನ್ನು ಯಾರೂ ನಿರ್ಧರಿಸಲು ಬಿಡಬೇಡಿ. ನೀವು ಮಾತ್ರ ಅದನ್ನು ನಿರ್ಧರಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಠಾಣೆಗೆ ನುಗ್ಗಿ, ದಾಂಧಲೆ – ಮೂವರು ನೈಜೀರಿಯನ್ನರನ್ನು ಬಿಡಿಸಿಕೊಂಡು ಹೋದ ನೂರಾರು ಜನ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k