ಚಿತ್ರದುರ್ಗ: ಸರ್ಕಾರಿ ಶಾಲೆಗಳು ಮುಚ್ಚಿ ಹೋಗ್ತಿವೆ, ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರ್ತಾನೆ ಇಲ್ಲ ಅನ್ನೋ ಕೂಗು ಒಂದೆಡೆಯಾದ್ರೆ ಇತ್ತ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಶಾಸಕರ ಬಲಗೈ ಬಂಟನೊಬ್ಬ ಇರೋ ಶಾಲಾ ಕೊಠಡಿಗಳನ್ನೇ ನೆಲಸಮ ಮಾಡಿಸಿ ತನ್ನ ದರ್ಪ ದೌಲತ್ತು ಪ್ರದರ್ಶನ ಮಾಡಿದ್ದಾನೆ.
Advertisement
ಹೌದು. ಇದು ಸಮಾಜ ಕಲ್ಯಾಣಕ್ಕೆ ಅಂತಾ ಇರೋ ಸಚಿವ ಎಚ್ ಆಂಜನೇಯ ಜಿಲ್ಲೆಯ ಕಥೆ. ಚಿತ್ರದುರ್ಗ ತಾಲೂಕಿನ ಬೆಳಗಟ್ಟದಲ್ಲಿರುವ ಪ್ರಾಥಮಿಕ ಶಾಲೆಗೆ ಸೇರಿದ ಮೂರು ಕೊಠಡಿಗಳನ್ನು ಶಾಸಕ ಕೆ ಟಿ ರಘಮೂರ್ತಿ ಬೆಂಬಲಿಗ ವೀರೇಶ್ ರೆಡ್ಡಿ ಧ್ವಂಸಗೊಳಿಸಿದ್ದಾನೆ.
Advertisement
Advertisement
ರಂಗಮಂದಿರ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಆದ್ರೆ ಎಲ್ಲೂ ಜಾಗ ಇಲ್ಲ. ಹೀಗಾಗಿ ಶಾಲಾ ಕಟ್ಟಡ ನೆಲಸಮ ಮಾಡಿಸಿದ್ದೇವೆ. ಬೇಕಾದ್ರೆ ಇಡೀ ಶಾಲೆಯನ್ನೇ ಕೆಡವಿ ಹಾಕಿ ಅಂತಾ ಶಾಸಕರು ಬೇರೆ ಹೇಳಿದ್ದಾರೆ ಎಂದು ವಿರೇಶ್ ರೆಡ್ಡಿ ತಿಳಿಸಿದ್ದಾನೆ.
Advertisement
ಸ್ಥಳೀಯ ಮುಖಂಡರ ಮುಂದಾಳತ್ವದಲ್ಲಿ ಏಕಾಏಕಿ ಶನಿವಾರದಿಂದ ಕಟ್ಟಡವನ್ನು ಕೆಡವುತ್ತಿದ್ದಾರೆ. ಶಾಲೆಯ ಮೂಖ್ಯೋಪಾಧ್ಯಾಯರು, ಎಸ್‍ಡಿಎಂಸಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರ ಅನುಮತಿ ಸಿಕ್ಕಿದೆ. ಇನ್ಯಾರನ್ನ ಕೇಳ್ಬೇಕು ಅಂತಾ ದರ್ಪದಿಂದ ಮಾತನಾಡಿದ್ದಾರೆ ಅಂತಾ ಸ್ಥಳೀಯ ನಿವಾಸಿಗಳು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.