ಚಿಕ್ಕಬಳ್ಳಾಪುರ: ಆಟವಾಡುತ್ತಿದ್ದ ವೇಳೆ ಶಾಲೆಯ ಕಾಂಪೌಂಡ್ ಸಮೇತ ಗೇಟ್ ಕುಸಿದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದಿನ್ನೂರು ಗ್ರಾಮದಲ್ಲಿ ನಡೆದಿದೆ.
ಅರುಣ್(7) ಮೃತ ವಿದ್ಯಾರ್ಥಿ. ಈ ಬಾಲಕ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಅರುಣ್ ಆಟವಾಡುತ್ತಿದ್ದ ವೇಳೆ ಏಕಾಏಕಿ ಕಾಂಪೌಂಡ್ ಸಮೇತ ಗೇಟ್ ಕುಸಿದು ಮೈಮೇಲೆ ಬಿದ್ದಿದೆ. ಬಾಲಕನ ಮೈಮೇಲೆ ಕಾಂಪೌಂಡ್ ಗೇಟ್ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದನು. ಬಳಿಕ ಅರುಣ್ ನನ್ನ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
Advertisement
Advertisement
ಗ್ರಾಮಸ್ಥರು ಕಾಂಪೌಂಡ್ ಗೇಟ್ ಅಳವಡಿಸಿದ್ದ ಗಾರೆ ಕೆಲಸದವನ ವಿರುದ್ಧ ದೂರಿದ್ದಾರೆ. ಸದ್ಯ ಶಾಲೆಗೆ ಡಿಡಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇತ್ತ ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Advertisement
ಕಳಪೆ ಕಾಮಗಾರಿ ಕಾರಣನಾ?
ಅಸಲಿಗೆ ನರೇಗಾ ಯೋಜನೆಯೆಡಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ, ಜಿಲ್ಲಾ ಪಂಚಾಯತ್ ಕಳೆದ ಆರು ತಿಂಗಳಿಂದ ಮುಂದಾಗಿದೆ. ಹೀಗಾಗಿ ದಿನ್ನೂರು ಶಾಲೆಗೆ ಸಹ 6 ತಿಂಗಳ ಹಿಂದೆ ಕಾಂಪೌಂಡ್ ನಿರ್ಮಾಣವಾಗಿತ್ತು. ಆದರೆ ಕಾಂಪೌಂಡಿಗೆ ಗೇಟ್ ಇಟ್ಟಿರಲಿಲ್ಲ. ಕಳೆದ ಒಂದು ವಾರದ ಹಿಂದೆ ಕಾಂಪೌಂಡಿಗೆ ಗೇಟ್ ಅಳವಡಿಸಿಲಾಗಿತ್ತು. ಇದರಿಂದ ಕಳೆದ ವಾರ ಅಳವಡಿಸಿದ ಗೇಟ್ ಹಳೆಯ ಕಾಂಪೌಂಡ್ ಗೋಡೆಯ ಜೊತೆ ಹೊಂದಿಕೊಂಡಿಲ್ಲ. ಹೀಗಾಗಿ ಏಕಾಏಕಿ ಕಾಂಪೌಂಡ್ ಸಮೇತ ಗೇಟ್ ಕುಸಿದು ಬಿದ್ದು ಅಲ್ಲೇ ಆಟವಾಡುತ್ತಿದ್ದ ಅರುಣ್ ಮೇಲೆ ಬಿದ್ದಿದೆ.
Advertisement
ಈ ವೇಳೆ ಅರುಣ್ ಕೈ ಕಾಲಿಗೆ ಗಂಭೀರವಾಗಿ ಗಾಯಗಳಾಗಿತ್ತು. ಅಷ್ಟೇ ಅಲ್ಲದೇ ಶ್ವಾಸಕೋಶದ ಮೇಲೆ ಭಾರೀ ಒತ್ತಡ ಬಿದ್ದು ಉಸಿರಾಟದ ತೊಂದರೆ ಎದುರಾಗಿತ್ತು. ಆದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅರಣ್ ಮೃತಪಟ್ಟಿದ್ದಾನೆ ಅಂತ ಶಾಲೆಯ ಶಿಕ್ಷಕರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv