ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 9-12ನೇ ಕ್ಲಾಸ್‍ವರೆಗೆ ಶಾಲಾ-ಕಾಲೇಜ್ ಆರಂಭವಾಗ್ತಿದೆ. ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಸ್ಕೂಲ್ ಓಪನ್‍ಗೆ ಭರ್ಜರಿ ಸಿದ್ಧತೆ ನಡೆದಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲಾ ಕೇಂದ್ರಗಳಲ್ಲಿ 9-12ನೇ ತರಗತಿಗಳು ಆರಂಭವಾಗಲಿದೆ. 26 ಜಿಲ್ಲೆಗಳಲ್ಲೂ ಶಾಲಾ-ಕಾಲೇಜು ಆರಂಭಕ್ಕೆ ತಯಾರಿ ಆಗಿದೆ.
Advertisement
ಮೊದಲ ಹಂತವಾಗಿ 9-12 ನೇ ತರಗತಿವರೆಗೆ ಇಂದಿನಿಂದ ಭೌತಿಕ ತರಗತಿಗಳು ಪ್ರಾರಂಭವಾಗ್ತಿದೆ. ಬೆಂಗಳೂರಿನ ವಿಜಯನಗರದ ಖಾಸಗಿ ಶಾಲೆಗಳಲ್ಲಿ ಸ್ವಚ್ಛತಾಕಾರ್ಯ ಭರದಿಂದ ನಡೆದಿದೆ. ಶಾಲಾ ಕೊಠಡಿಗಳಲ್ಲಿ ಸ್ಯಾನಿಟೇಸೇಷನ್ ಮಾಡಲಾಗಿದೆ. ಇದನ್ನೂ ಓದಿ: ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಪ್ರತಾಪ್ ಸಿಂಹ ಹೇಳೋದು ತಪ್ಪು: ವಿಶ್ವನಾಥ್
Advertisement
Advertisement
ಭಾನುವಾರ ತುಮಕೂರಿನ ಹೆಗ್ಗರೆಯ ಸಿದ್ದಾರ್ಥ ಪ್ರೌಢಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಕ್ಕಳು ಶಾಲೆಗೆ ಬರಲು ಪೋಷಕರ ಅನುಮತಿ ಕಡ್ಡಾಯ. ಮುಂದಿನ ಹಂತದಲ್ಲಿ 1ರಿಂದ 8ನೇ ತರಗತಿ ಆರಂಭಕ್ಕೆ ಪ್ರಯತ್ನ ಮಾಡ್ತೇವೆ ಅಂತ ಮಾಹಿತಿ ನೀಡಿದರು. ಖಾಸಗಿ ಶಾಲೆ-ಕಾಲೇಜ್‍ಗಳು ಕೂಡ ಸಿದ್ಧವಾಗಿದೆ. ಇಂದು ಮಲ್ಲೇಶ್ವರದ ಎರಡು ಶಾಲೆಗಳಿಗೆ ಸಿಎಂ ಬೊಮ್ಮಾಯಿ ಖುದ್ದು ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಇದನ್ನೂ ಓದಿ: ಬದಲಾಯ್ತು ಸುಶಾಂತ್ ಎಫ್‍ಬಿ ಫೋಟೋ- ಸ್ವರ್ಗದಲ್ಲಿ ನೆಟ್‍ವರ್ಕ್ ಸಿಗುತ್ತಾ ಅಂದ್ರು ಫ್ಯಾನ್ಸ್
Advertisement
ಶಾಲೆ ಆರಂಭಕ್ಕೆ ಮಾರ್ಗಸೂಚಿ:
* 9 ಮತ್ತು 10ನೇ ತರಗತಿಗಳಿಗೆ ಆರಂಭದಲ್ಲಿ ಅರ್ಧ ದಿನ ಭೌತಿಕ ತರಗತಿ.
( ಸೋಮ-ಶುಕ್ರವಾರದವರೆಗೆ ಬೆ.10ರಿಂದ ಮ.1.30ರವರೆಗೂ, ಶನಿವಾರ ಮ. 12.30ರವರೆಗೆ ಕ್ಲಾಸ್)
* 15 ರಿಂದ 20 ಮಕ್ಕಳನ್ನು ಒಂದು ಗುಂಪಾಗಿ ವಿಂಗಡಿಸಿ ಭೌತಿಕ ತರಗತಿ ನಡೆಸಬೇಕು.
* ಮಕ್ಕಳು ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ.
* ಪತ್ರದಲ್ಲಿ ಮಗುವಿಗೆ ಸೋಂಕು ಲಕ್ಷಣ ಇಲ್ಲ ಎಂಬುದನ್ನು ದೃಢೀಕರಿಸಿರಬೇಕು.
* ತರಗತಿಗಳಿಗೆ ಮಕ್ಕಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆನ್‍ಲೈನ್ ಕ್ಲಾಸ್‍ಗೂ ಹಾಜರಾಗಬಹುದು.
* ಬೆಂಚ್‍ಗಳ ಉದ್ದ ಆಧರಿಸಿ ಒಬ್ಬರು ಅಥವಾ ಇಬ್ಬರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು.
* ಮನೆಯಿಂದಲೇ ಅಗತ್ಯವಾದ ಕುಡಿಯುವ ನೀರು, ಉಪಹಾರ ತರಬೇಕು.
* 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ್, ಜೊತೆಗೆ ಫೇಸ್‍ಶೀಲ್ಡ್ ಧರಿಸಬೇಕು.
* ಶಿಕ್ಷಕರು ಕನಿಷ್ಠ 1 ಡೋಸ್ ಆದರೂ ಪಡೆದಿರಲೇಬೇಕು. ಸೋಂಕು ಲಕ್ಷಣ ಇದ್ದಲ್ಲಿ ರಜೆ ಪಡೆಯಬೇಕು.
ಪಿಯುಸಿ ತರಗತಿಗಳಿಗೆ ಮಾರ್ಗಸೂಚಿ
* ಆನ್‍ಲೈನ್ ಅಥವಾ ಆಫ್‍ಲೈನ್ ಕ್ಲಾಸ್‍ಗೆ ಹಾಜರಾತಿ ಕಡ್ಡಾಯ
* ಭೌತಿಕ ತರಗತಿಗೆ ಹಾಜರಾಗೋದು ಕಡ್ಡಾಯ ಅಲ್ಲ
* ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ
* ಎರಡು ಬ್ಯಾಚ್‍ನಲ್ಲಿ ಕಾಲೇಜು ನಡೆಸಬೇಕು. ( 50:50)
* ಮೊದಲ ಬ್ಯಾಚ್‍ಗೆ ವಾರದ ಮೊದಲ 3 ದಿನ.. 2ನೇ ಬ್ಯಾಚ್‍ಗೆ ವಾರದ ಕೊನೆಯ 3 ದಿನ ಕ್ಲಾಸ್
* ವಿಶಾಲವಾದ ಕೊಠಡಿ ಇದ್ದರೆ 100 ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ತರಗತಿ
* ಮಕ್ಕಳು ಪೋಷಕರಿಂದ ಅನುಮತಿ ಪತ್ರ ತರುವುದು ಕಡ್ಡಾಯ
* ಪತ್ರದಲ್ಲಿ ಮಗುವಿಗೆ ಸೋಂಕು ಲಕ್ಷ ಇಲ್ಲ ಎಂಬುದನ್ನು ದೃಢೀಕರಿಸಿರಬೇಕು
* 50 ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ಫೇಸ್ ಶೀಲ್ಡ್ ಕಡ್ಡಾಯ
* ಆರೋಗ್ಯ ವ್ಯತ್ಯಾಸ, ಬೇರೆ ರೋಗ ಲಕ್ಷಣ ಇದ್ರೆ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗೆ ಕಾಲೇಜಿಗೆ ನೋ ಎಂಟ್ರಿ