Connect with us

Crime

12 ಮಂದಿ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಪಲ್ಟಿ

Published

on

ಗದಗ: ಸ್ಟೇರಿಂಗ್ ಕಟ್ಟಾದ ಪರಿಣಾಮ ಶಾಲಾ ಮಕ್ಕಳಿದ್ದ ಶಾಲಾ ಬಸ್ ಪಲ್ಟಿಯಾಗಿರುವ ಘಟನೆ ಗದಗ ತಾಲೂಕಿನ ಕಲ್ಲೂರ ಗ್ರಾಮದ ಬಳಿ ನಡೆದಿದೆ.

ಗದಗ ತಾಲೂಕಿನ ಹೊಸಳ್ಳಿಯ ಬೂದಿಶ್ವರ ವಿದ್ಯಾಪೀಠಕ್ಕೆ ಸೇರಿದ ಶಾಲಾ ಬಸ್ ಇದಾಗಿದ್ದು, ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಈ ಅಪಘಡ ಸಂಭವಿಸಿದೆ. ಸದ್ಯಕ್ಕೆ ಬಸ್ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಬಸ್ ಕಲ್ಲೂರು, ಚಿಂಚಲಿ, ಅಂತೂರ, ಬೆಂತೂರ ಗ್ರಾಮದ ಮಕ್ಕಳನ್ನ ಶಾಲೆಗೆ ಕರೆದುಕೊಂಡು ಹೋಗುತ್ತಿತ್ತು. ಎಂದಿನಂತೆ ಇಂದು ಕೂಡ ಬಸ್ ಮೊದಲಿಗೆ ಒಂದು ಗ್ರಾಮದ ಮಕ್ಕಳನ್ನು ಕರೆದುಕೊಂಡು ಇನ್ನೊಂದು ಗ್ರಾಮಕ್ಕೆ ಹೋಗುತ್ತಿತ್ತು. ಈ ವೇಳೆ ಸ್ಟೇರಿಂಗ್ ಕಟ್ಟಾಗಿ ಚಾಲಕನ ಜಾಗರೂಕತೆಯಿಂದ ಕಲ್ಲೂರ ಗ್ರಾಮದ ಬಳಿ ಬಸ್ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿದೆ.

ಈ ಅಪಘಾತದಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಬಸ್ಸಿನಲ್ಲಿ 12 ವಿದ್ಯಾರ್ಥಿಗಳು ಇದ್ದರು. ಸದ್ಯಕ್ಕೆ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *