ಬೆಂಗಳೂರು: ಶಾಲಾ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮ ಬೈಕ್‍ನ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಸ್ತೆಯ ಮಂಟಪ ಗೇಟ್ ಬಳಿ ನಡೆದಿದೆ.
ಆಂಧ್ರಪ್ರದೇಶ ಮೂಲದ ನಾಗೇಶ್(ಜಾನಿ) ಮೃತ ಬೈಕ್ ಹಿಂಬದಿ ಸವಾರ. ಎಂಡೆವೋರ್ ಅಕಾಡೆಮಿಗೆ ಸೇರಿದ ಶಾಲಾವಹನ ಬೈಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಕೆಳಗೆ ಬಿದಿದ್ದಾರೆ. ಹಿಂಬದಿ ಸವಾರನ ಮೇಲೆ ವಾಹನ ಹರಿದ ಪರಿಣಾಮ ನಾಗೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Advertisement
ಮೃತ ನಾಗೇಶ್ ಬನ್ನೇರುಘಟ್ಟದ ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಪಘಾತದ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಎಂಡೆವೋರ್ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ಬೇರೊಬ್ಬ ಚಾಲಕನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಲು ಡ್ರಾಮ ನಡೆಸಿದ್ದಾರೆ ಎಂದು ಹೇಳಲಾಗಿದೆ.