ಮುಂಬೈ: ಶಾಲಾ ಬಸ್‍ವೊಂದರ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕ 16 ಮಕ್ಕಳನ್ನು ಅಪಾಯದಿಂದ ಕಾಪಾಡಿದ್ದಾರೆ.
ಗೋರೆಗಾಂವ್ ನ ಒಬೆರಾಯ್ ಮಾಲ್ ಸಿಗ್ನಲ್ ಬಳಿ ಈ ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ ಗೋಕುಲ್ಧಾಮ್ ನಲ್ಲಿರುವ ರಯಾನ್ ಇಂಟರ್ ನ್ಯಾಷನಲ್ ಶಾಲೆಗೆ ಸೇರಿದ್ದಾಗಿದೆ.
Advertisement
ಶಾಲೆಯಿಂದ ಮಧ್ಯಾಹ್ನ ಸುಮಾರು 1.30ಕ್ಕೆ ವಿದ್ಯಾರ್ಥಿಗಳನ್ನು ಪಿಕ್ ಮಾಡಿದೆ. ನಂತರ ಒಬೆರಾಯ್ ಮಾಲ್ ಜಂಕ್ಷನ್ ಬಳಿ ಬಂದಿದ್ದು, ಅಲ್ಲಿ ನನಗೆ ಬಸ್ ನ ಬ್ರೇಕ್ ಫೇಲ್ ಆಗಿರುವುದು ತಿಳಿಯಿತು. ಬಳಿಕ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆಯಿತು. ನಾನು ಎಡಕ್ಕೆ ಬಸ್ ತಿರುಗಿಸಿದೆ. ಅಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದೆ. ರಸ್ತೆಯಲ್ಲಿ ಬಸ್ ಮೂರು ಸಣ್ಣ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಜನರು ಗಾಯಗೊಂಡಿದ್ದಾರೆ. ಆದರೆ ನಾನು ವಿದ್ಯಾರ್ಥಿಗಳನ್ನು ಕಾಪಾಡಲು ಪ್ರಯತ್ನಿಸಿದೆ ಎಂದು ಬಸ್ ಚಾಲಕ ಕಿಶನ್ ಮಾರುತಿ ಗೈಕ್ವಾಡ್ ತಿಳಿಸಿದ್ದಾರೆ.
Advertisement
Advertisement
ಅದೃಷ್ಟವಶಾತ್ ಚಾಲಕ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ. ಅವರು ಅನುಭವಿ ಹಾಗೂ ತುಂಬಾ ಎಚ್ಚರಿಕೆಯಿಂದ ಚಾಲನೆ ಮಾಡುತ್ತಾರೆ. ಈ ಮಾರ್ಗದಲ್ಲಿ ಬಸ್ ಅನೇಕ ಬಾರಿ ಈ ರೀತಿಯ ತೊಂದರೆಯನ್ನು ಎದುರಿಸಿವೆ. ಬಸ್‍ಗಳನ್ನ ಸರಿಯಾಗಿ ನಿರ್ವಹಣೆ ಮಾಡಬೇಕಿರುವುದು ಶಾಲೆಯ ಜವಾಬ್ದಾರಿಯಾಗಿದೆ ಎಂದು ಮಕ್ಕಳ ಪೋಷಕರು ಹೇಳಿದ್ದಾರೆ.
Advertisement
ಬ್ರೇಕ್ ಪೈಪ್ ಒಡೆದಿದೆ. ಆದ್ದರಿಂದ ಬ್ರೇಕ್ ಫೇಲ್ ಆಗಿದೆ. ಈ ರೀತಿ ಆಗಿರುವುದು ಇದೇ ಮೊದಲು ಎಂದು ಸಾಯಿ ಗಣೇಶ್ ಟ್ರಾವೆಲ್ಸ್ ನ ಮಾಲೀಕ ದೀಪಕ್ ನಾಯ್ಕ್ ಹೇಳಿದ್ದಾರೆ. ಅಪಘಾತದ ನಂತರ ಬೇರೆ ಬಸ್ಸಿನಲ್ಲಿ ಎಲ್ಲಾ ಮಕ್ಕಳು ಸುರಕ್ಷಿತರಾಗಿ ಮನೆಗೆ ಕಳುಹಿಸಲಾಗಿದೆ ಎಂದು ಶಾಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.