ಹುಬ್ಬಳ್ಳಿ: ಶಿಕ್ಷಕಿಯೊಬ್ಬರು ಶಾಲಾ ಬಾಲಕನಿಗೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ತಲೆ ಬೋಳಿಸಿ ಅವಮಾನವೀಯ ಘಟನೆ ಹುಬ್ಬಳ್ಳಿಯ ನೆಹರು ನಗರದ ಸೇಂಟ್ ಪಾಲ್ ಶಾಲೆಯಲ್ಲಿ ಬುಧವಾರ ನಡೆದಿದೆ.
ಆರನೇ ತರಗತಿಯ ವಿದ್ಯಾರ್ಥಿ ಮುಖ್ಯ ಶಿಕ್ಷಕಿಯಿಂದ ಚಿತ್ರಹಿಂಸೆಗೆ ಒಳಗಾದ ಬಾಲಕ. ಕೂದಲು ಬಿಟ್ಟು ಜಡೆ ಹಾಕಿಕೊಂಡು ಬರುತ್ತಿದ್ದನು. ಇದರಿಂದ ಮುಖ್ಯ ಶಿಕ್ಷಕಿ ಲೋರಿಟಾ ವೇದಮುಕ್ತಿ ಎಂಬವರು ಬುಧವಾರ ಮಧ್ಯಾಹ್ನ ಶಾಲಾ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅರ್ಧ ತಲೆ ಬೋಳಿಸಿ ಅವಮಾನ ಮಾಡಿದ್ದಾರೆ.
- Advertisement
ಈ ಕುರಿತು ಪ್ರತಿಕ್ರಿಯಿಸಿರುವ ಶ್ಯಾಮ್ಯೂಯಲ್ ಪಾಲಕರು, ಮನೆಯಲ್ಲಿ ಸೂತಕವಿದ್ದ ಕಾರಣ ನಮ್ಮ ಮಗನಿಗೆ ಕಟಿಂಗ್ ಮಾಡಿಸಿದ್ದಿಲ್ಲ. ಅಷ್ಟರಲ್ಲಿ ಶಾಲೆಯ ಶಿಕ್ಷಕಿಯೊಬ್ಬರು ನಮ್ಮ ಮಗನ ತಲೆ ಬೋಳಿಸಿ ಅವಮಾನಗೊಳಿಸಿದ್ದಾರೆ. ಚಿಕ್ಕಮಕ್ಕಳ ಜೊತೆಯಲ್ಲಿ ಅಮಾನವಿಯತೆಯಿಂದ ನಡೆದುಕೊಳ್ಳುವ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಶಾಲೆಯಲ್ಲಿ ನಡೆದ ಘಟನೆಯಿಂದ ನಮ್ಮ ಮಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.
- Advertisement
ನಗರದಲ್ಲಿ ನಮ್ಮ ಶಾಲೆ ಶಿಸ್ತಿಗೆ ಹೆಸರಾಗಿದ್ದು, ನಾವು ಶ್ಯಾಮ್ಯೂಯಲನಿಗೆ ಒಂದು ತಿಂಗಳಿನಿಂದ ತಲೆ ಕೂದಲನ್ನು ಕತ್ತರಿಸುವಂತೆ ತಿಳಿಸಿದ್ದೇವು. ಅಷ್ಟೇ ಅಲ್ಲದೇ ಅವನ ಪಾಲಕರಿಗೂ ಈ ಕುರಿತು ತಿಳಿಸಲಾಗಿತ್ತು. ಕೊನೆಗೆ ಬುಧವಾರ ಎಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ಯಾಮ್ಯೂಯಲ್ ತಲೆ ಬೋಳಿಸಲಾಗಿದೆ. ಈ ರೀತಿಯ ಘಟನೆಗಳು ನಮ್ಮಲ್ಲಿ ಈ ಹಿಂದೆಯೂ ನಡೆದಿದೆ. ಆದರೆ ಇದನ್ನು ಶ್ಯಾಮುಯಲ್ ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ ಎಂದು ಶಾಲೆಯ ಹೆಡ್ ಕ್ಲರ್ಕ್ ಜ್ಯೋತಿ ಹೇಳುತ್ತಾರೆ.