– ಮಕ್ಕಳು ಮಾರ್ಕ್ಸ್ ತೆಗೆದ್ರೂ ಶಿಕ್ಷಣ ಸಚಿವರು ತಮ್ಮ ಸಾಧನೆ ಅಂತಾರೆ!
ಬೆಂಗಳೂರು: ರಾಜ್ಯ ಸರ್ಕಾರದ ಎರಡು ವರ್ಷಗಳ ಆಡಳಿತದಲ್ಲಿ ಹಗರಣಗಳು ಬಿಟ್ಟು ಬೇರೆ ಯಾವ ಸಾಧನೆಯನ್ನೂ ಮಾಡಿಲ್ಲ ಎಂದು ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ (Kumar Bangarappa) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ವಸತಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಬಿ.ಆರ್. ಪಾಟೀಲ್ (B.R Patil) ಆಡಿಯೋ ವಿಚಾರ ಮತ್ತು ಸಚಿವ ಹೆಚ್.ಕೆ. ಪಾಟೀಲ್ ಪತ್ರದ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಈ ಎರಡು ಪ್ರಕರಣದಲ್ಲಿ ಸರ್ಕಾರ ಹೇಗೆ ದಾರಿ ತಪ್ಪಿದೆ ಎಂದು ಗೊತ್ತಾಗ್ತಿದೆ. ಅಭಿವೃದ್ಧಿ ಕೆಲಸ ಆಗ್ತಿಲ್ಲ. ಕ್ಷೇತ್ರಕ್ಕೂ ಅನುದಾನ ಸಿಗ್ತಿಲ್ಲ. ಶಿಕ್ಷಣ ಇಲಾಖೆ ಎಲ್ಲೋ ಹೋಗಿದೆ. ಮಕ್ಕಳು ಓದಿ ಅಂಕ ಪಡೆದರು ಸಚಿವರು ನಮ್ಮ ಸಾಧನೆ ಎಂದು ಹೇಳಿಕೊಳ್ತಾರೆ. ಸರ್ಕಾರದ ಯಾವ ಇಲಾಖೆಯೂ ಸರಿಯಾಗಿ ಕೆಲಸ ಆಗಿಲ್ಲ. ಎರಡು ವರ್ಷಗಳಲ್ಲಿ ಹಗರಣಗಳೇ ಈ ಸರ್ಕಾರದ ಸಾಧನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಒಂದೇ ತಿಂಗಳಲ್ಲಿ ಹೃದಯಾಘಾತಕ್ಕೆ 13 ಬಲಿ – ಕೋವಿಡ್ ಲಸಿಕೆ ಕಾರಣವಲ್ಲ ತನಿಖೆಯಲ್ಲಿ ಬಯಲು
ಈ ಸರ್ಕಾರ ರಾಜ್ಯವನ್ನು ಏಳಿಗೆ ಕಡೆಗೆ ತೆಗೆದುಕೊಂಡು ಹೋಗುವುದಿಲ್ಲ. ಸಂತೋಷದ ವಿಷಯ ಎಂದರೆ ರಾಜ್ಯದ ಡ್ಯಾಂಗಳು ತುಂಬುತ್ತಿವೆ. ಡ್ಯಾಂ ತುಂಬಿದ್ರು ರೈತರು ಸಂಕಷ್ಟದಲ್ಲಿ ಇದ್ದಾರೆ. ಮಾವು ಬೆಳೆ ನಷ್ಟ ಆಗಿದೆ. ರೈತನ ಪರ ಸರ್ಕಾರ ನಿಲ್ಲಬೇಕು ಅಂತ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮುಜುಗರವಾದ ಬೆನ್ನಲ್ಲೇ ಬಿಆರ್ ಪಾಟೀಲ್‌ಗೆ ಸಿಎಂ ಬುಲಾವ್
 


 
		 
		 
		 
		 
		
 
		 
		 
		 
		