ಲಕ್ನೋ: ಸಲಿಂಗಕಾಮಿಗಳ ಡೇಟಿಂಗ್ ಆ್ಯಪ್ (Gay Dating App) ಬಳಸಿಕೊಂಡು ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಉತ್ತರ ಪ್ರದೇಶದ (Uttar Pradesh) ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಲಿಂಗಕಾಮಿ ಡೇಟಿಂಗ್ ಆ್ಯಪ್ ಆಗಿರುವ ‘ಬ್ಲೂಡ್’ನಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ರಚಿಸಿ ಯುವಕರನ್ನು ವಂಚಿಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಲಖನ್ ಸಿಂಗ್ ಯಾದವ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಆರೋಪಿಗಳು ಗೇ ಡೇಟಿಂಗ್ ಆ್ಯಪ್‌ನಲ್ಲಿ ಅಮಾಯಕ ಯುವಕರೊಂದಿಗೆ ಚಾಟ್ ಮಾಡಿ ಬಳಿಕ ಡೇಟಿಂಗ್‌ಗೆ ಕರೆಯುತ್ತಿದ್ದರು. ಬಳಿಕ ಯುವಕರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಬೆತ್ತಲೆ ವೀಡಿಯೋಗಳನ್ನು ಶೂಟ್ ಮಾಡಿದ್ದಾರೆ. ತದನಂತರ ಯುವಕರಿಂದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಬೆತ್ತಲೆ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ, ಅವರ ಫೋನ್ ಬಳಸಿ ಯುಪಿಐ ಮೂಲಕ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ
ಇದೇ ರೀತಿ ವಂಚನೆಗೆ ಒಳಗಾದ ಯುವಕನೊಬ್ಬ ಪೊಲೀಸರನ್ನು ಸಂಪರ್ಕಿಸಿ ತನ್ನ ನಗ್ನ ವೀಡಿಯೋಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ದೂರು ನೀಡಿದ್ದಾನೆ. ಈ ಬಗ್ಗೆ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.
ಯುವಕನಿಂದ ಮಾಹಿತಿ ಪಡೆದ ಪೊಲೀಸರು ವಂಚನೆಯಲ್ಲಿ ತೊಡಗಿದ್ದ 6 ಜನರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ದಿಲೀಪ್ ಅಲಿಯಾಸ್ ಪ್ರದ್ಯುಮ್ನ್ ಸಿಂಗ್ (21), ಅರುಣ್ ರಜಪೂತ್ (22), ವಿಪಿನ್ ಸಿಂಗ್ (21), ಪವನ್ ಕುಮಾರ್ ಸಿಂಗ್ (22), ಪ್ರವೀಣ್ ಸಿಂಗ್ (20) ಹಾಗೂ ಬ್ರಿಜೇಂದ್ರ ಸಿಂಗ್ (19) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಹೃದಯಾಘಾತದಿಂದ ಹೆಸರಾಂತ ನಿರ್ದೇಶಕ ಸಿದ್ದಿಕಿ ನಿಧನ
Web Stories