ಹುಬ್ಬಳ್ಳಿ: ಸೌತ್ ವೆಸ್ಟ್ ರೈಲ್ವೆ ಇಲಾಖೆಯ ಡಿಗ್ರೇಡ್ ಪದೋನ್ನತಿ ಪರೀಕ್ಷೆ ಪ್ರಾರಂಭಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ ಬೆನ್ನಲ್ಲೇ ರೈಲ್ವೆ ಇಲಾಖೆ ತನಿಖೆಗೆ ಸೂಚಿಸಿದೆ.
ಸೌತ್ ವೆಸ್ಟ್ ರೈಲ್ವೆ ಇಲಾಖೆಯ ರೈಲ್ವೆ ಗೂಡ್ಸ್ ಟ್ರೈನ್ ಮ್ಯಾನೇಜರ್ ಸಿಇಟಿಯ ಪ್ರಶ್ನೆಪತ್ರಿಕೆ(Question Paper) ಬಹಿರಂಗ ಆರೋಪದ ವರದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾಗುತ್ತಿದ್ದಂತೆ ರೈಲ್ವೆ ಇಲಾಖೆ(Railway Department) ಎಚ್ಚೆತ್ತಿದೆ. ಅಕ್ರಮ ತನಿಖೆಗೆ ವಿಭಾಗದ ಜಿಎಂ ಆದೇಶಿಸಿದ್ದಾರೆ. ಈ ಕುರಿತು ರೈಲ್ವೆ ಇಲಾಖೆಯಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದ್ದು, ಅಕ್ರಮದ ಕುರಿತು ಪಾರದರ್ಶಕ ತನಿಖೆ ನಡೆಸೋದಾಗಿ ಮಾಧ್ಯಮಗಳಿಗೆ ಸಿಪಿಆರ್ ಓ ಅನೀಷ್ ಹೆಗಡೆ ಭರವಸೆ ನೀಡಿದ್ದಾರೆ.
Advertisement
Advertisement
ಘಟನೆಯೇನು?: ರೈಲ್ವೆ ಗೂಡ್ಸ್ ಟ್ರೈನ್ ಮ್ಯಾನೇಜರ್ ಸಿಇಟಿಯ ಪ್ರಶ್ನೆಪತ್ರಿಕೆ ಬಹಿರಂಗವಾಗಿದ್ದು, ಜಿ.ಟಿ.ಎಂ. ಪರೀಕ್ಷಾರ್ಥಿಗಳಿಂದಲೇ ಹಗರಣ ಬೆಳಕಿಗೆ ಬಂದಿತ್ತು. ಸೆ. 4ರಂದು ಜಿಟಿಎಲ್ ನೌಕರರ ಪದೋನ್ನತಿ ಪರೀಕ್ಷೆ ಆನ್‍ಲೈನ್ ಮೂಲಕ ನಡೆದಿತ್ತು. ಆದರೆ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ವಾಟ್ಸ್‌ಪ್‍ನಲ್ಲಿ ಹರಿದಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿತ್ತು. ಇದನ್ನೂ ಓದಿ: ನಾನೇನು ಸ್ವಂತ ಬೋಟ್‌ನಲ್ಲಿ ಹೋಗಿದ್ನಾ; ಬೇಕಿದ್ರೆ ಲಿಂಬಾವಳಿ ಕೇಳಿ?: ಸಿದ್ದು ಬೋಟ್ ಪ್ರಸಂಗ
Advertisement
Advertisement
147 ಹುದ್ದೆಗಳಿಗೆ ಒಟ್ಟು 4,685 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಶೇ. 95 ರಿಂದ 96 ರಷ್ಟು ಅಂಕ ಬಂದಿದೆ. ರೈಲ್ವೆ ಇಲಾಖೆ ಇತಿಹಾಸದಲ್ಲೇ ಇದೇ ಮೊದಲ ಬಾರಿ ಇಷ್ಟು ಅಂಕ ಬಂದಿದೆ. ಇದು ಕೀ ಪಾಯಿಂಟ್ಸ್ ಬಿಡುಗಡೆಯಾದ ಮೇಲೆ ಹಗರಣ ಬಯಲಿಗೆ ಬಂದಿದೆ. ಇನ್ನೂ ಈ ಬಗ್ಗೆ ನೈರುತ್ಯ ರೈಲ್ವೆಯ ಜಿ.ಎಂ.ಗೆ ಅಭ್ಯರ್ಥಿಗಳು ದೂರು ಸಲ್ಲಿಸಿದ್ದು, ಮರುಪರೀಕ್ಷೆಗೆ ಆಗ್ರಹಿಸಿದ್ದರು. ಇದನ್ನೂ ಓದಿ: ಗಾಯಾಳನ್ನು ಆಸ್ಪತ್ರೆಗೆ ಹೊತ್ತು ತಂದ ಬುಲ್ಡೋಜರ್