ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‍ನಲ್ಲೂ ಗೋಲ್ಮಾಲ್- ಕಾಸು ಕೊಟ್ರೆ ಸರ್ಕಾರಿ ಹುದ್ದೆ..?

Public TV
1 Min Read
ASISTANT PROFESSOR SOWMYA

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಹುದ್ದೆ ಮಾರಾಟಕ್ಕಿದ್ಯಾ ಎಂಬ ಪ್ರಶ್ನೆಯೊಂದು ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಸರ್ಕಾರಿ ಹುದ್ದೆಗಳ ಒಂದೊಂದೇ ಹಗರಣಗಳು ಬಯಲಾಗುತ್ತಿವೆ. 30 ರಿಂದ 40 ಲಕ್ಷ ಕೊಟ್ಟರೆ ಸಾಕು ನಿಮಗೆ ಸರ್ಕಾರಿ ಹುದ್ದೆ ಸಿಗುತ್ತೆ.

 ಕಳೆದ ಮಾರ್ಚ್‍ನಲ್ಲಿ ನಡೆದಿದ್ದ 1,242 ಹುದ್ದೆಯಲ್ಲೂ ಹಗರಣದ ವಾಸನೆ ಬರುತ್ತಿದೆ. ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್ ನಲ್ಲಿ ಗೋಲ್ಮಾಲ್ ನಡೆದಿರುವ ವಿಚಾರವೊಂದು ಬೆಳಕಿಗೆ ಬಂದಿದೆ. 20ಕ್ಕೂ ಹೆಚ್ಚು ಪ್ರಶ್ನೆಗಳು ಮೊಬೈಲ್‍ನಲ್ಲಿ ಹರಿದಾಡಿದ್ದೇಗೆ…?, ಪರೀಕ್ಷೆಗೂ ಮೊದಲೇ ಭೂಗೋಳ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದೇಗೆ ಎಂಬುದಕ್ಕೆ ಇದೀಗ ಪರೀಕ್ಷಾರ್ಥಿಗಳು ಕೊಟ್ಟ ದೂರಿನಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ.

ASISTANT PROFESSOR

ಮೈಸೂರಿನಲ್ಲಿ ಬಂಧಿತ ಸೌಮ್ಯಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸೌಮ್ಯ ಮೊಬೈಲ್‍ನಲ್ಲಿ 18 ಪ್ರಶ್ನೆಗಳು ಇದ್ದವು. ಜಿಲ್ಲಾ ಖಜಾನೆಯಿಂದಲೇ ಪೇಪರ್ ಲೀಕ್ ಶಂಕೆ ವ್ಯಕ್ತವಾಗಿದೆ. ಬಂಡಲ್ ಓಪನ್ ಮಾಡಿ ಪ್ರಶ್ನೆಪತ್ರಿಕೆ ಪಡೆದಿರೋ ಅನುಮಾನ ಎದ್ದಿದೆ. ಬಂಧಿತ ಸೌಮ್ಯಳಿಂದ ಇನ್ನಿತರರಿಗೂ ರವಾನೆಯಾಗಿರುವ ಅನುಮಾನ ಇದೆ. ಇದನ್ನೂ ಓದಿ: ಅಕ್ರಮದಲ್ಲಿ ಒಳಗಾಗಿದ್ದವರು ಎಷ್ಟೇ ದೊಡ್ಡವರಾದ್ರೂ ರಕ್ಷಿಸುವ ಪ್ರಶ್ನೆಯಿಲ್ಲ: ಆರಗ ಜ್ಞಾನೇಂದ್ರ

ASISTANT PROFESSOR 2

ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಇದೀಗ ಪೊಲೀಸರು ಸೌಮ್ಯಳನ್ನ ಪೊಲೀಸ್ ಕಸ್ಟಡಿಗೆ ಕೇಳಲಿದ್ದಾರೆ. ಎಸಿಪಿ ನೇತೃತ್ವದ ಟೀಂ ನಿಂದ ವಿಚಾರಣೆ ಸಾಧ್ಯತೆ ಇದೆ. ಪಿಹೆಚ್ ಡಿ ಸ್ಟೂಡೆಂಟ್ ಆಗಿದ್ದ ಸೌಮ್ಯಳಿಗೆ ಪ್ರಶ್ನೆ ಪತ್ರಿಕೆ ಸಿಕ್ಕಿದ್ದಾದ್ರೂ ಹೇಗೆ..?, ಸೌಮ್ಯಳಿಂದ ಪ್ರಶ್ನೆ ಪತ್ರಿಕೆ ಲೀಕ್ ಆಗೋದಿಕ್ಕೆ ಕಾರಣ ಯಾರು..?, ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಅಡಗಿದೆಯಾ ದೊಡ್ಡವರ ಕೈವಾಡ..?, ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಇದ್ದಾರಾ..? ಪ್ರೊಫೆಸರ್‍ಗಳು..?, ಸೌಮ್ಯ ಯಾರ ಅಂಡರ್‍ನಲ್ಲಿ ಪಿಹೆಚ್‍ಡಿ ಮಾಡುತ್ತಿದ್ದಳು..?. ಅವರಿಂದಲೇ ಲೀಕ್ ಆಗಿದ್ಯಾ ಪ್ರಶ್ನೆ ಪತ್ರಿಕೆ..? ಅಂತ ಪೊಲೀಸರು ತನಿಖೆ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *