ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ನಕಲಿ ಛಾಪಾ ಕಾಗದ ಹರಣವನ್ನು (Stamp Paper Scam) ವೆಬ್ ಸರಣಿಗೆ ಅಳವಡಿಸಿದ್ದಾರೆ ನಿರ್ದೇಶಕ ಹನ್ಸಲ್ ಮೆಹ್ತಾ. ಇದೀಗ ಸರಣಿಯ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ಈ ಹಗರಣದ (Scandal) ರೂವಾರಿ ಕರೀಂ ಲಾಲ್ ತೆಲಗಿಯ (Karimlal Telgi) ಹಲವು ರೂಪಗಳನ್ನು ಈ ಸರಣಿಯಲ್ಲಿ ತೋರಿಸಲಾಗುತ್ತಿದೆ.
Advertisement
ಭಾರತೀಯ ಅತೀ ದೊಡ್ಡ ಹರಗಣದಲ್ಲಿ ಛಾಪಾ ಕಾಗದ ಹರಣವೂ ಒಂದು. ಸರಿಸುಮಾರು 32 ಸಾವಿರ ಕೋಟಿ ಮೊತ್ತದ ಹಗರಣ ಇದಾಗಿದ್ದು, ಈ ಹರಣದಲ್ಲಿ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು, ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು ಎಂದು ಹೇಳಲಾಗಿತ್ತು. ಈ ಹಗರಣವನ್ನೇ ವೆಬ್ ಸರಣಿ ರೂಪದಲ್ಲಿ ತರಲಾಗುತ್ತಿದೆ. ಈ ಸರಣಿಗೆ ‘ಸ್ಕ್ಯಾಮ್ 2003’ (Scam 2003)ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ
Advertisement
Advertisement
ಈ ತೆಲಗಿ ಕರ್ನಾಟಕದವನು ಆಗಿದ್ದರಿಂದ ಮತ್ತು ಆತನನ್ನು ಬಂಧಿಸಿದ್ದು, ವಿಚಾರಣೆ ಮಾಡಿದ್ದು, ಜೈಲಿನಲ್ಲಿ ಇರಿಸಿದ್ದು ಕರ್ನಾಟಕದಲ್ಲೇ ಆಗಿರುವುದರಿಂದ ಕನ್ನಡಿಗರಿಗೆ ಈ ಸರಣಿ (Web Series) ತುಂಬಾ ಕುತೂಹಲ ಮೂಡಿಸಿದೆ. ಈ ಹಗರಣದೊಂದಿಗೆ ಬೆಸೆದುಕೊಂಡಿದ್ದ ಅಧಿಕಾರಿಗಳು, ಪತ್ರಕರ್ತರು, ರಾಜಕಾರಣಿಗಳ ಕಥೆಯೂ ಇರಲಿದೆಯಾ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.
Advertisement
ಈ ಸರಣಿಯು ಸೆಪ್ಟೆಂಬರ್ 2 ರಿಂದ ಸ್ಟ್ರೀಮಿಂಗ್ ಆಗಲಿದ್ದು, ತೆಲಗಿ ಪಾತ್ರದಲ್ಲಿ ಮುಖೇಶ್ ತಿವಾರಿ (Mukesh Tiwari) ನಟಿಸಿದ್ದಾರೆ. ಉಳಿದ ಪಾತ್ರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ, ಹಿನ್ನೆಲೆಯಲ್ಲಿ ಸಂಭಾಷಣೆ ಬಳಸಿಕೊಂಡು, ಟ್ರೈಲರ್ ಕುತೂಹಲ ಮೂಡಿಸುತ್ತಿದೆ.
Web Stories