ನವದೆಹಲಿ: ಪಾಕಿಸ್ತಾನದ (Pakistan) ಮೇಲೆ ಭಾರತ ಏರ್‌ಸ್ಟ್ರೈಕ್ (AirStrike) ಮಾಡಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ನಿಖರ ದಾಳಿಗೆ ಭಾರತ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದೆ.
SCALP ಕ್ರೂಸ್ ಕ್ಷಿಪಣಿ, HAMMER ಬಾಂಬ್ ಬಳಸಿ ಆಪರೇಷನ್ ಸಿಂಧೂರ (Operation Sindhur) ಕಾರ್ಯಾಚರಣೆಯನ್ನು ಭಾರತ ಯಶಸ್ವಿಯಾಗಿ ನಡೆಸಿದೆ. 25 ನಿಮಿಷದಲ್ಲಿ 24 ಕ್ಷಿಪಣಿಯನ್ನು ಪ್ರಯೋಗಿಸಿ ಉಗ್ರರನ್ನು ಸಂಹಾರ ಮಾಡಲಾಗಿದೆ. ಇದನ್ನೂ ಓದಿ: Operation Sindoor | ತಲೆ ಕೆಡಿಸಿಕೊಂಡು ʻಸಿಂಧೂರʼ ಅರ್ಥ ಹುಡುಕಾಡ್ತಿದೆ ಪಾಕ್ – ಗೂಗಲ್‌ನಲ್ಲಿ ಟ್ರೆಂಡ್
SCALP
ಇದು ದೀರ್ಘ-ಶ್ರೇಣಿಯ, ವಾಯು-ಉಡಾವಣಾ ಕ್ರೂಸ್ ಕ್ಷಿಪಣಿಯಾಗಿದ್ದು, ಬಂಕರ್‌ಗಳು ಮತ್ತು ನಿರ್ಣಾಯಕ ಮೂಲಸೌಕರ್ಯವನ್ನು ನಾಶಮಾಡಲು ಬಳಸಲಾಗುತ್ತದೆ.
ಯುರೋಪಿಯನ್ ರಕ್ಷಣಾ ಸಂಸ್ಥೆ MBDA ನಿಂದ ತಯಾರಿಸಲ್ಪಟ್ಟ ಈ ಕ್ಷಿಪಣಿಯು ಸರಿಸುಮಾರು 1,300 ಕಿಲೋಗ್ರಾಂಗಳಷ್ಟು (2,870 ಪೌಂಡ್‌ಗಳು) ತೂಕವಿರುವ SCALP ಅನ್ನು ರಫೇಲ್‌ನಂತಹ ಫೈಟರ್ ಜೆಟ್ ಮೂಲಕ ಉಡಾವಣೆ ಮಾಡಲಾಗುತ್ತದೆ. 500 ಕಿ.ಮೀ ದೂರದಲ್ಲಿರುವ ನೆಲೆಗಳನ್ನು ಧ್ವಂಸ ಮಾಡುವ ಸಾಮರ್ಥ್ಯ SCALPಗೆ ಇದೆ. ಇದನ್ನೂ ಓದಿ: Operation Sindoor | ಶ್ರೀನಗರ ಏರ್‌ಪೋರ್ಟ್ ನಿಯಂತ್ರಣಕ್ಕೆ ಪಡೆದ IAF – ಜೆ&ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
SCALP ಕ್ಷಿಪಣಿಯನ್ನು ಇರಾಕ್, ಲಿಬಿಯಾ, ಸಿರಿಯಾ ಯುದ್ಧದಲ್ಲಿ ಬಳಕೆ ಮಾಡಲಾಗಿದೆ. ರಷ್ಯಾ ಯುದ್ಧದ ಸಮಯದಲ್ಲಿ ಉಕ್ರೇನ್ ಈ ಕ್ಷಿಪಣಿಯನ್ನು ಬಳಕೆ ಮಾಡಿತ್ತು.
ಹ್ಯಾಮರ್ (HAMMER)
Highly Agile Modular Munition Extended Range ಅನ್ನು ಸಂಕ್ಷಿಪ್ತವಾಗಿ HAMMER ಎಂದು ಕರೆಯಲಾಗುತ್ತದೆ. ಈ ಕ್ಷಿಪಣಿಯನ್ನು ಫ್ರೆಂಚ್ ರಕ್ಷಣಾ ಸಂಸ್ಥೆಯಾದ ಸಫ್ರಾನ್ ಎಲೆಕ್ಟ್ರಾನಿಕ್ಸ್, ಡಿಫೆನ್ಸ್ ಅಭಿವೃದ್ಧಿಪಡಿಸಿದೆ. ಮಧ್ಯಮ-ಶ್ರೇಣಿಯ ಯುದ್ಧತಂತ್ರದ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಇದು ಜಿಪಿಎಸ್, ಇನ್ಫ್ರಾರೆಡ್ ಇಮೇಜಿಂಗ್ ಮತ್ತು ಲೇಸರ್ ಟಾರ್ಗೆಟಿಂಗ್ ಸೇರಿದಂತೆ ವಿವಿಧ ಮಾರ್ಗದರ್ಶನ ವ್ಯವಸ್ಥೆಗಳೊಂದಿಗೆ ಅಳವಡಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ನಿಖರವಾಗಿ ಗುರಿಯನ್ನು ತಲುಪಿ ಧ್ವಂಸ ಮಾಡುತ್ತದೆ.
ಸೂಸೈಡ್ ಡ್ರೋನ್:
ಪಾಕ್ ಉಗ್ರರ ವಿರುದ್ಧದ ದಾಳಿಗೆ ಭಾರತ ಡ್ರೋನ್ ಸಹ ಬಳಕೆ ಮಾಡಿದೆ. ದೂರದಿಂದಲೇ ನಿಯಂತ್ರಣ ಮಾಡುವ ಮೂಲಕ ಉಗ್ರರ ಮೇಲೆ ಡ್ರೋನ್ ದಾಳಿ ಮಾಡಲಾಗಿದೆ. ಶಸ್ತ್ರಾಸ್ತ್ರ ತುಂಬಿದ ಡ್ರೋನ್‌ಗಳು ನೆಲೆಗಳನ್ನು ಅಪ್ಪಳಿಸಿದ ಕೂಡಲೇ ಸ್ಫೋಟಗೊಂಡಿದೆ.